ಕಾರ್ ಡಿಕ್ಕಿ ಸಾಫ್ಟ್ ವೇರ್ ಇಂಜಿನಿಯರ್ ಸಾವು

Techie dies in Accident in Bangalore
ಬೆಂಗಳೂರು, ಡಿ. 17 : ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದರಿಂದ ಬೈಕ್ ನಲ್ಲಿ ತೆರಳುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಗೌಡನ ಪಾಳ್ಯ 1 ನೇ ಕ್ರಾಸ್ ಬಳಿ ಶ್ರೀ ಕಂಪನಿ ಸಮೀಪದ ನಿವಾಸಿ ತಾರಕೇಶ್(27) ಸಾವನ್ನಪ್ಪಿರುವ ನತದೃಷ್ಟ. ಜಯನಗರದ 5ನೇ ಬ್ಲಾಕ್, 9ನೇ ಮೇನ್ ರೋಡ್, 36ನೇ ಅಡ್ಡರಸ್ತೆ ಸತ್ಯಸಾಯಿ ಸರ್ಕಲ್ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿ ತೆರಳುತ್ತಿದ್ದ ತಾರಕೇಶ್ ಅವರಿಗೆ ಎದುರಗಡೆಯಿಂದ ಬರುತ್ತಿದ್ದ ವೇಗದ ಕಾರು ಡಿಕ್ಕಿ ಹೊಡೆದಿದ್ದರಿಂದ ಸಾಫ್ಟ್ ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಹಚ್ಚಿ ಕೊಲೆ : ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಬಿಬಿಎಂಟಿಸಿ ಚಾಲಕ ಬೇರೊಬ್ಬಳೊಂದಿಗೆ ಓಡಾಡುತ್ತಿರುವುದನ್ನು ಸಹಿಸದ ಆಕೆ ತನ್ನ ಇತರ ಗೆಳೆತಿಯರೊಂದಿಗೆ ಪ್ರಿಯತನನನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಕೊಲೆ ಮಾಡಿದ ಘಟನೆ ಗುರುವಾರ ನಡೆದಿದೆ.

ಮಳವಳ್ಳಿ ಮೂಲದ ಸತೀಶ್(35) ಕೊಲೆಯಾದವ. ಬಿಎಂಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸತೀಶ್, ಕಾರ್ಪೋರೇಷನ್ ವೃತ್ತದ ಬಳಿ ಮಗುವಿನ ಮೇಲೆ ಬಸ್ ಹತ್ತಿಸಿದ್ದರಿಂದ ಕೆಲಸದಿಂದ ಅಮಾನತುಗೊಂಡಿದ್ದ. ಗೀತಾ(45) ಕೊಲೆ ಮಾಡಿದ ಮಹಿಳೆ. ಕುಣಿಗಲ್ ಮೂಲದ ಈ ಮಹಿಳೆಯೊಂದಿಗೆ ಸತೀಶ್ ಅಕ್ರಮ ಸಂಬಂಧವಿರಿಸಿಕೊಂಡಿದ್ದ. ಇಬ್ಬರೂ ಮದುವೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+