ಭಯೋತ್ಪಾದನೆ : ಮುಸ್ಲಿಮರಿಗಿಂತ ಹಿಂದುಗಳೇ ಹೆಚ್ಚು ಡೆಡ್ಲಿ

Rahul Gandhi
ವಾಷಿಂಗ್ಟನ್, ಡಿ. 17 : ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ಸಂಘಟನೆಗಳಿಂದ ಭಾರತ ಹೆಚ್ಚು ಅಪಾಯ ಎದುರಿಸುತ್ತಿದೆ ಎಂದು ಭಾರತದ ಭಾವೀ ಪ್ರಧಾನಿ ಎಂದು ಬಿಂಬಿತವಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಹೇಳಿರುವುದು ವಿಕಿಲೀಕ್ಸ್ ಸಿಡಿಸಿರುವ ಹೊಸ ಬಾಂಬ್!

ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ಟಿಮೋತಿ ರೋಮರ್ ಅವರಿಗೆ ಈ ಕುರಿತು 2009ರಲ್ಲಿಯೇ ರಾಹುಲ್ ಗಾಂಧಿ ಹೇಳಿದ್ದರೆಂದು ವಿಕಿಲೀಕ್ಸ್ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ ಹಿಂದೂ ಮೂಲಭೂತವಾದಿಗಳಿಂದ ಆತಂಕ ಹೆಚ್ಚುತ್ತಿದ್ದು, ಮುಸ್ಲಿಂ ಸಮುದಾಯದೊಂದಿಗೆ ಧಾರ್ಮಿಕ ಮತ್ತು ರಾಜಕೀಯ ಸಂಘರ್ಷಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದುದಾಗಿ ದಿ ಗಾರ್ಡಿಯನ್ ಪತ್ರಿಕೆ ಪ್ರಕಟಿಸಿದೆ.

ಮುಸ್ಲಿಂ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾದಂಥ ಸಂಘಟನೆಗಳಿಗೆ ಭಾರತದ ಕೆಲ ಮುಸ್ಲಿಂ ಸಂಘಟನೆಗಳಿಂದ ಬೆಂಬಲವಿದೆ. ಆದರೆ, ಅವರಿಗಿಂತ ಹಿಂದೂ ಉಗ್ರವಾದಿಗಳಿಂದ ಹೆಚ್ಚು ಆತಂಕವನ್ನು ಭಾರತ ಎದುರಿಸುತ್ತಿದೆ ಎಂದು, ರಾಹುಲ್ ಹೇಳಿಕೆಯನ್ನು ಟಿಮೋತಿ ರೋಮರ್ ಪ್ರಸ್ತಾಪಿಸಿದ್ದಾಗಿ ವರದಿಯಾಗಿದೆ.

ರಾಹುಲ್ ಗಾಂಧಿಯಂಥ ಯುವ ನಾಯಕರು ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವುದು ಅಮೆರಿಕಾದೊಡನೆಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಸಹಾಯಕವಾಗುತ್ತಿದೆ ಎಂದು ರೋಮರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+