ಬೆಸ್ಕಾಂ ಇಂಜಿನಿಯರ್ ಕೊಲೆ ಆರೋಪಿಗಳ ಬಂಧನ

ಶವ ಪತ್ತೆಯಾದ ನಂತರ ಎಚ್ಚತ್ತುಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು ಬಿಬಿಎಂಪಿ ನೌಕರ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಬಿಎಂಪಿಯಲ್ಲಿ ವೈರ್ ಮನ್ ಆಗಿರುವ ವಿಜಯ್ ಕುಮಾರ್(46), ಹರೀಶ್(18), ರಾಜೇಶ್(18), ಶಿವಕುಮಾರ್(21) ಹಾಗೂ ಅರುಣ್ ಬಂಧಿತರು.
ನಗರದ ಸುಧಾಮನಗರದಲ್ಲಿರುವ ವಿಜಯ್ ಕುಮಾರ್ ಅವರ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಇಂಜಿನಿಯರ್ ಕೃಷ್ಣಮೂರ್ತಿ ಅವರನ್ನು ಕೊಲೆ ಮಾಡಿ ತಮಿಳುನಾಡಿನ ತಿರುವಣ್ಣಾಮಲೈ ಹತ್ತಿರದ ಡಿಂಡಿವರಂ ಬಳಿಯ ಬಾವಿಯೊಂದರಲ್ಲಿ ಶವ ಎಸೆದು ಬರುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಂಕರ ಬಿದರಿ ಹೇಳಿದ್ದಾರೆ.
ಹಣಕಾಸು ವಿವಾದದ ಸಂಬಂಧ ಈ ಘಟನೆ ನಡೆದಿದ್ದು, ಶವ ಬೀಸಾಡಲು ಸಹಕರಿಸಿದ ತಮಿಳುನಾಡಿನ ವ್ಯಕ್ತಿ ಬಂಧನಕ್ಕೆ ಬಲೆ ಬೀಸಲಾಗಿದೆ. ತ್ವರಿತವಾಗಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ತಂಡಕ್ಕೆ 25 ಸಾವಿರ ರುಪಾಯಿಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications