ಬಳ್ಳಾರಿಯಲ್ಲಿ ಸಾರ್ವಜನಿಕ ಮೊಹರಂ ಆಚರಣೆ ಇಲ್ಲ

Public Muharram Celebration ban in Bellary
ಬಳ್ಳಾರಿ. ಡಿ. 17: ಬಳ್ಳಾರಿ ಜಿಲ್ಲೆಯಲ್ಲಿ ಡಿಸೆಂಬರ್ 17ರಂದು ಮೊಹರಂ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ವರದಿ ಬಂದಿಲ್ಲ ಎಂದು ಜಿಲ್ಲಾ ದಂಡಾಧಿಕಾರಿ ಬಿ. ಶಿವಪ್ಪ ಅವರು ಹೇಳಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಆದೇಶವು ಜಾರಿಯಲ್ಲಿರುತ್ತಿದೆ. ನಿಷೇಧಾವಧಿಯಲ್ಲಿ ಅಂಗಡಿಗಳು, ಷಾಪ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಯಾವುದೇ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ 35 ಗ್ರಾಮಗಳಲ್ಲಿ ಮೊಹರಂ ಸಾರ್ವಜನಿಕ ಆಚರಣೆ ನಿಷೇಧ ಹೇರಲಾಗಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗಲ್ಲು, ವಣೆನೂರು, ಜಾಲಿಬೆಂಚಿ, ಡಿ ಕಗ್ಗಲ್ಲು, ಬಿಡಿ ಹಳ್ಳಿ, ಕೆ.ಕೆ. ಹಾಳ್ ಮತ್ತು ಸಿಂಧುವಾಳ, ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರಸಿಂಗ್ ಕ್ಯಾಂಪ್, ಹೊಸನೆಲ್ಲುಡಿ, ಯರಂಗಳಿಗಿ ಮತ್ತು ನೆಲ್ಲುಡಿಕೊಟ್ಟಾಲು.

ತೆಕ್ಕಲಕೋಟೆ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ ಪಟ್ಟಣ, ಹಳೆಕೋಟೆ, ಉಪ್ಪಾರಹೊಸಹಳ್ಳಿ, ಉಡೇಗೋಳ, ಸಿರಿಗೇರಿ, ಶಾನವಾಸಪುರ, ದರೂರು, ಬೂದೂಗುಪ್ಪ, ಉತ್ತನೂರು, ಎಚ್. ಹೊಸಹಳ್ಳಿ, ಬೈರಾಪುರ, ಕೂರಿಗನೂರು, ಮಾಟೇಸೂಗೂರು, ಗೋಸ್‌ಬಾಳ್ ಮತ್ತು ಮುದ್ದಟನೂರು. ಸಿರುಗುಪ್ಪ ಪೊಲೀಸ್‌ಠಾಣೆ ವ್ಯಾಪ್ತಿಯ ನಾಡಂಗ, ಕೆ. ಸೂಗೂರು, ಬಂಡ್ರಾಳ್, ದೇಶನೂರು, ಮುದೇನೂರು, ಕೆ. ಬೆಳಗಲ್ಲು ಮತ್ತು ಹಿರೇಹಾಳ್, ಕೂಡ್ಲಿಗಿ ಠಾಣೆ ವ್ಯಾಪ್ತಿಯ ಹನ್ಸಿ ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ನಿಷೇಧಿಸಲಾಗಿದೆ.

ಈ ಗ್ರಾಮಗಳಲ್ಲಿ ಸಾರ್ವಜನಿಕರು ಗುಂಪಾಗಿ ಸೇರುವುದು ಮತ್ತು ಮೆರವಣಿಗೆ ನಡೆಸುವಂತಿಲ್ಲ ಎಂದು ಡಿಸಿ ಶಿವಪ್ಪ ಹೇಳಿದ್ದಾರೆ. ಅಶುರ ಎಂದು ಕರೆಯಲ್ಪಡುವ ಹತ್ತನೇ ಮೊಹರಂ ಅನ್ನು ಇಂದು ಮುಸ್ಲಿಮರು(ಷಿಯಾ) ಎಲ್ಲೆಡೆ ಆಚರಿಸುತ್ತಿದ್ದಾರೆ. ಪ್ರವಾದಿ ಮಹಮ್ಮದರ ಮೊಮ್ಮಗ ಇಮಾಮ್ ಹುಸ್ಸೇನ್ ಬಲಿದಾನದ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+