ವೈಕುಂಠ ಏಕಾದಶಿ : ಲಾಡು ವಿತರಣೆಗೆ ಆಯೋಗ ಅಸ್ತು

ಲಾಡುಗಳನ್ನು ಮುಜರಾಯಿ ಇಲಾಖೆ ಪಡೆದುಕೊಂಡು ತನ್ನ ಸಿಬ್ಬಂದಿಯೊಂದಿಗೆ ವಿತರಿಸಬೇಕು. ಪ್ರಸಾದದ ಕವರಿನ ಮೇಲೆ ದಾನಿಗಳ ಅಥವಾ ರಾಜಕೀಯ ಪಕ್ಷಗಳ ಹೆಸರನ್ನು ಬರೆಯಬಾರದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭೆ ಸಮಾರಂಭಗಳು ರಾಜಕೀಯ ಪಕ್ಷ ಮತ್ತು ನೇತಾರರಿಂದ ಮುಕ್ತವಾಗಿದ್ದು ಅಲ್ಲಿ ಯಾವುದೇ ಭರವಸೆ ನೀಡಬಾರದೆಂದು ಎಂದು ಆಯೋಗ ಷರತ್ತು ವಿಧಿಸಿದೆ.
ಸರ್ವಜನಪ್ರಿಯ ಬೂಂದಿ ಲಾಡು ತಯಾರಿಸುವ ವಿಧಾನ
ಕರ್ನಾಟಕ ಮುಜರಾಯಿ ಮಂಡಳಿಯ ಅಧ್ಯಕ್ಷ ಎನ್ ಕೃಷ್ಣಯ್ಯ ಶೆಟ್ಟಿ ಆಯೋಗಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಿ ವೈಕುಂಠ ಏಕಾದಶಿಯ ಪ್ರಯುಕ್ತ ಪ್ರಸಾದ ರೂಪದಲ್ಲಿ ಮಾತ್ರ ಲಾಡುಗಳ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಹಿತಾಶಕ್ತಿ ಇಲ್ಲವೆಂದು ಮನವರಿಕೆ ಮಾಡಿದ ಮೇಲೆ ಚುನಾವಣಾ ಆಯೋಗ ಲಾಡು ವಿತರಿಸಲು ಅನುಮತಿ ನೀಡಿದೆ.












Click it and Unblock the Notifications