ಯಾರ್ರಿ ಹೇಳಿದ್ದು, ನಾನು ಕೈ ಕೊಡ್ತೀನಿ ಅಂತಾ: ಅಂಬಿ

Ambareesh
ಬೆಂಗಳೂರು, ಡಿ. 15: ಮಂಡ್ಯದ ಗಂಡು ಅಂಬರೀಷ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಜೆಡಿಎಸ್ ಸೇರಲಿದ್ದಾರೆ ಎಂದು ಹಬ್ಬಿದ್ದ ಗಾಳಿ ಸುದ್ದಿಯನ್ನು ಅಂಬರೀಷ್ ಅಲ್ಲಗೆಳೆದಿದ್ದಾರೆ. ನಾನು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಮತ್ತೊಮ್ಮೆ ಘೋಷಿಸಿದ್ದಾರೆ. ಬಿಜೆಪಿ 'ಆಪರೇಷನ್ ಕಮಲ"ಕ್ಕೆ ಬಲಿಯಾದ ಜೆಡಿಎಸ್ ಶಾಸಕ ಅಶ್ವತ್ಥ್‌ರಿಂದ ತೆರವಾದ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕ, ನಟ ಅಂಬರೀಷ್‌ರನ್ನು ಕಣಕ್ಕಿಳಿಸಲು ಜೆಡಿಎಸ್ ತೆರೆಮರೆಯಲ್ಲಿ ಕಸರತ್ತು ನಡೆಸಿತ್ತು. ಎಚ್ ಡಿ ಕುಮಾರಸ್ವಾಮಿ ಅವರು ಅಂಬರೀಷ್ ಅವರಿಗೆ ಮಾಡಿದ ಫೋನ್ ಕಾಲ್ ಹಲವು ಗೊಂದಲದ ಬೆಳವಣಿಗೆಗೆ ಕಾರಣವಾಗಿತ್ತು.

ಚನ್ನಪಟ್ಟಣ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಅಧಿಕವಾಗಿರುವುದರಿಂದ ಒಕ್ಕಲಿಗ ಸಮುದಾಯದ ಅಂಬರೀಷ್‌ರನ್ನು ಕಣಕ್ಕಿಳಿಸಿದರೆ ಗೆಲುವು ಖಚಿತ ಎಂಬ ಲೆಕ್ಕಾಚಾರವನ್ನು ಮುಂದಿಟ್ಟು ಜೆಡಿಎಸ್ ಅಂಬರೀಶ್‌ರನ್ನು ಜೆಡಿಎಸ್‌ಗೆ ಸೆಳೆದುಕೊಳ್ಳಲು ಕಸರತ್ತಿಗೆ ಮುಂದಾಗಿತ್ತು. ಈ ಕುರಿತು ಮುನ್ಸೂಚನೆ ಅರಿತ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮಂಗಳವಾರ ಏಕಾಏಕಿ ಅಂಬರೀಷ್ ನಿವಾಸಕ್ಕೆ ಭೇಟಿ ನೀಡಿ, ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗದಂತೆ ಮನವಿ ಮಾಡಿದರು..

ಅಲ್ಲದೆ ಸುದೀರ್ಘ ಮಾತುಕತೆಯ ನಂತರ ಅಂಬರೀಷ್ ಮಾಧ್ಯಮದವರೊಂದಿಗೆ ಮಾತನಾಡಿ, ತನ್ನೊಂದಿಗೆ ಪರಮೇಶ್ವರ್ ರವರು ಮುಂದಿನ ಜಿಪಂ, ತಾಪಂ ಚುನಾವಣೆಯ ಕುರಿತು ಸಮಾಲೋಚನೆ ಮಾಡಿದ್ದಾರೆ. ಈ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತಾನು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇನೆ. ಯಾವುದೇ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಹೋಗುವ ನಿರ್ಧಾರ ತನ್ನ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಿಂದ ಕೇಂದ್ರದ ಸಚಿವನಾಗಿದ್ದೀನಿ, ಜನ ನನ್ನನ್ನು ಗುರುತಿಸುವುದು ಕಾಂಗ್ರೆಸ್ಸಿಗನೆಂದೆ, ನಾನು ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಕುಮಾರಸ್ವಾಮಿ ಫೋನ್ ಕಾಲ್ ವಿಷ್ಯ ನನಗೆ ಗೊತ್ತಿಲ್ಲ ಎಂದು ಅಂಬರೀಷ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+