ಕೊಳ್ಳೆಗಾಲ ಬಳಿ ಲಾರಿ-ಟಾಟಾ ಸುಮೋ ಡಿಕ್ಕಿ : 6 ಸಾವು

ಜಗದೀಶ್ (35), ಸರಸ್ವತಿ(55), ರಾಜಮ್ಮ(45)ಮತ್ತು ಪಂಕಜಾ(25) ಎಂಬುವವರು ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಹೆಸರುಗಳು ತಿಳಿದು ಬಂದಿಲ್ಲ. ಮೃತರೆಲ್ಲರೂ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮೃತರು ಮಹದೇಶ್ವರ ಬೆಟ್ಟಕ್ಕೆ ಟಾಟಾ ಸುಮೂದಲ್ಲಿ ತೆರಳುತ್ತಿದ್ದರು.
ಟಾಟಾ ಸುಮೋದ ಚಾಲಕ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಮೂರನೇ ಭೀಕರ ದುರಂತ ಇದು. ಮಂಗಳವಾರ ಮೈಸೂರು ಬಳಿ ಇರುವ ದಳವಾಯಿ ಕೆರೆಯಲ್ಲಿ ಮಿನಿಲಾರಿಯೊಂದು ಉರುಳಿಬಿದ್ದು 27 ಮಂದಿ ಜಲಸಮಾಧಿ ಆಗಿದ್ದರು. ಕೂಡ್ಲಿಗಿ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬುಧವಾರ ಸಂಭವಿಸಿರುವ ಭೀಕರ ಅಪಘಾತದಲ್ಲಿ ಮೂವರು ಅಸುನೀಗಿದ್ದಾರೆ.












Click it and Unblock the Notifications