ಕೆರೆಯಲ್ಲಿ ಟೆಂಪೋ ಮುಳುಗಿ 28 ಜನ ಜಲಸಮಾಧಿ

ಟೆಂಪೋದಲ್ಲಿ ಚಾಲಕನೂ ಸೇರಿ 33 ಜನರಿದ್ದರು. ಎಲ್ಲರೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನವರು. ಬೀಗರ ಊಟಕ್ಕೆ ಇವರೆಲ್ಲರೂ ತೆರಳಿದ್ದರು. ಔತಣ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಶವಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೈಸೂರು ಪೊಲೀಸರು, ಅಗ್ನಿಶಾಮಕ ದಳ, ಮೈಸೂರು ಎಸ್ಪಿ ಕೂಡಾ ಸ್ಥಳಕ್ಕೆ ದಾವಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ. ಟೆಂಪೋದಲ್ಲಿ ಇರುವವರೆಲ್ಲರೂ ಪಾಂಡವಪುರದವರು ಎಂದು ಹೇಳಲಾಗಿದೆ.
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆ ಅಭಿವೃದ್ಧಿಗೆ 3 ಕೋಟಿ ರುಪಾಯಿಗಳನ್ನು ಇತ್ತೀಚೆಗೆ ಸರಕಾರ ಬಿಡುಗಡೆ ಮಾಡಿತ್ತು. ಮೈಸೂರು-ನಂಜನಗೂಡು ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಇದರಿಂದ ರಸ್ತೆಗಳ ಚಿಂತಾಜನಕವಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಘಾತಕಾರಿ ಸಂಗತಿ : ದಳವಾಯಿ ಕೆರೆಯಲ್ಲಿ ಟೆಂಪೋ ಮುಳುಗಿರುವ ಘಟನೆ ನಡೆದಿರುವುದು ಆಘಾತ ತಂದಿದೆ. ಬೀಗರ ಔತಣಕ್ಕೆ ತೆರಳಿದ್ದವರು ಸಾವನ್ನಪ್ಪಿರುವ ನೋವಿನ ಸಂಗತಿ. ಒಟ್ಟು ಟೆಂಪೋದಲ್ಲಿ 33 ಜನ ಇದ್ದರು. ಅದರಲ್ಲಿ 16 ಶವಗಳನ್ನು ತೆಗೆಯಲಾಗಿದೆ. ಟೆಂಪೋದಲ್ಲಿರುವ ಎಲ್ಲರೂ ಮಹಿಳೆಯರೆ, ಅದರಲ್ಲಿ ಒಂದು ಮಗುವಿನ ಶವವೂ ಸಿಕ್ಕಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಮೈಸೂರು ಉಸ್ತುವಾರಿ ಮಂತ್ರಿ ಎಸ್ ಎ ರಾಮದಾಸ್ ಹೇಳಿದ್ದಾರೆ.











Click it and Unblock the Notifications