ಸಿಎಂ-ಪದ್ಮರಾಜ್ ಸಂಬಂಧ ಶೀಘ್ರ ಬಹಿರಂಗ: ಉಗ್ರಪ್ಪ

VS Ugrappa to reveal BSY Padmaraj relation
ದಾವಣಗೆರೆ, ಡಿ.9: ಭೂ ಹಗರಣ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಿದೆ ಸಿಎಂ ಯಡಿಯೂರಪ್ಪ ಅವರು ತಮ್ಮ ತಲೆ ಕಾಯ್ದುಕೊಳ್ಳಲು ನಿವೃತ್ತ ನ್ಯಾಯಾಧೀಶ ಪದ್ಮರಾಜ್ ಅವರಿಗೆ ತನಿಖೆ ನಡೆಸಲು ಹೇಳಿದ್ದಾರೆ. ಪದ್ಮರಾಜ್ ಮತ್ತು ಮುಖ್ಯಮಂತ್ರಿಗಳಿಗೆ ಯಾವ ರೀತಿ ಸಂಬಂಧವಿದೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಅವರು ಹೇಳಿದ್ದಾರೆ.

ಬುಧವಾರ ಹರಿಹರದಲ್ಲಿ ನಡೆದ ಗ್ರಾಮೀಣ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ಹೇಳಿದರು. ಭೂ ಹಗರಣಗಳ ಬಗ್ಗೆ ಕಾಂಗ್ರೆಸ್ ನೀಡಿರುವ ದೂರುಗಳನ್ನು ಲೋಕಾಯುಕ್ತರೇ ತನಿಖೆ ನಡೆಸಬೇಕು. ಈ ತನಿಖೆಯನ್ನು ನ್ಯಾ. ಪದ್ಮರಾಜ್ ನಡೆಸಬಾರದು ಎಂದು ಆಗ್ರಹಿಸಿದರು.

ಹಗರಣಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ನ್ಯಾಯಾಂಗ ತನಿಖೆ ನಾಟಕ ನಡೆಸಿದ್ದಾರೆ. ಜಿಲ್ಲಾ ಪಂಚಾಯತಿ, ತಾಲೂಕ್ ಪಂಚಾಯತಿ ಚುನಾವಣೆಗಳನ್ನು ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಹಣ ಹಾಗೂ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಮೂಲಕ ಹೆಚ್ಚು ಸ್ಥಾನ ಗಳಿಸುತ್ತಾರೆ ಎಂದರು.

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಗಡ್ಕರಿ ಅವರು ಮುಖ್ಯಮಂತ್ರಿಗಳ ಬೆನ್ನು ಚಪ್ಪರಿಸಿ ತೆರಳಿರುವುದು ದುರಂತ. ಈಶ್ವರಪ್ಪ ಅವರಂತೂ ರಾಜ್ಯಪಾಲ, ಲೋಕಾಯುಕ್ತರಿಗೂ ಗೌರವ ಕೊಡುವುದನ್ನು ಮರೆತಿದ್ದಾರೆ. ಹಗರಣಗಳಿಂದ ರಾಜ್ಯ ಮುಕ್ತವಾಗಿ ಜನತೆಗೆ ನ್ಯಾಯ ಸಿಗುವವರೆಗೂ ಕೆಪಿಸಿಸಿ ಹೋರಾಟ ನಡೆಸಲಿದೆ ಎಂದು ಉಗ್ರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+