ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಎಸ್ ವೈ ಜೈಲು, ಸಿದ್ದು
ಹಾಸನ,
ಡಿ. 8 : ಅನರ್ಹಗೊಂಡ ಶಾಸಕರ ಪರ ಸುಪ್ರೀಂಕೋರ್ಟ್ ತೀರ್ಪು ಬಂದರೆ ಸರಕಾರ ಪತನಗೊಳ್ಳುವುದು ನಿಶ್ಚಿತ. ಯಡಿಯೂರಪ್ಪ ಅವರಿಗೆ ಬಹುಮತವಿಲ್ಲ, ತಾಂತ್ರಿಕ ಆಧಾರದ ಮೇಲೆ ಸರಕಾರ ನಿಂತಿದೆ. ಭೂಹಗರಣದಿಂದ ಈಗ ಸಿಎಂ ತಪ್ಪಿಸಿಕೊಂಡರೂ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಸಮಗ್ರ ತನಿಖೆ ನಡೆಸಿ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸುವುದು ಖಂಡಿತ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. id="toptextpromo">ಜಿಲ್ಲಾ
ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಮೀಸಲಾತಿ ಪ್ರಸ್ತಾಪಕ್ಕೆ ಬಿಜೆಪಿ ಈ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದೆ ಎಂದರು. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಕಡಿಮೆ ಮಾಡಿ ಈ ವರ್ಗಗಳ ವಿರೋಧಿ ಎಂದು ಸಾಬೀತಾಗಿದೆ. ಈ ವರ್ಗದ ಜನರಿಗೆ ಅನ್ಯಾಯವಾಗಲು ರಾಜ್ಯಪಾಲರು ಕಾರಣವೆಂದು ಜನರ ಕಣ್ಣಿಗೆ ಮಂಕುಬೂದಿ ಎರಚಲು ಮುಂದಾಗಿದೆ. ಜನರಿಗೆ ಸ್ವಾಭಿಮಾನ ಎನ್ನುವುದು ಇದ್ದರೆ ಬಿಜೆಪಿ ಮತ್ತು ಜನತಾದಳ ಪಕ್ಷವನ್ನು ದೂರವಿಟ್ಟು ಎರಡೂ ಪಕ್ಷಗಳಿಗೆ ತಕ್ಕೆ ಪಾಠ ಕಲಿಸಿ ಎಂದು ಸಿದ್ದು ಆಗ್ರಹಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಡಿನೋಟಿಫಿಕೇಶನ್
ಅಪರಾಧವಲ್ಲ, ಕಾಂಗ್ರೆಸ್ ಕಾಲದಲ್ಲೋ ಇದು ನಡೆದಿದೆ. ಮುಖ್ಯಮಂತ್ರಿಗಳಿಗೆ ಈ ಅಧಿಕಾರವಿದೆ. ಆದರೆ, ಅಲ್ಲಿ ತಾರತಮ್ಯ, ಸ್ವಜನಪಕ್ಷಪಾತ, ಭ್ರಷ್ಟಾಚಾರ ನಡೆದಿದೆಯೇ ಎಂಬುದನ್ನು ನೋಡಬೇಕು. ಯಡಿಯೂರಪ್ಪ ತಪ್ಪು ಮಾಡಿರುವುದು ಸಾಬೀತಾಗಿದೆ. ನಮ್ಮ ದೇವಸ್ಥಾನಗಳು ಹಾಳುಬಿದ್ದು ಹೋಗುತ್ತಿದ್ದರೆ ತಮಿಳುನಾಡಿನ ದೇವಾಲಯಗಳಿಗೆ ಯಡಿಯೂರಪ್ಪ ಕೋಟಿ ರೂಪಾಯಿ ಕೊಡುತ್ತಿದ್ದಾರೆ. ರಾಜ್ಯದ ಬೊಕ್ಕಸದಿಂದ ಪರರಾಜ್ಯಗಳ ದೇವಸ್ಥಾನಗಳಿಗೆ ದೇಣಿಗೆ ನೀಡಲು ಅವರು ಯಾರ ಅನುಮತಿ ಪಡೆದಿದ್ದಾರೆ ಎಂದು ಸಿದ್ದು ಕಿಡಿಕಾರಿದ್ದಾರೆ.











Click it and Unblock the Notifications