ಪ್ಲಾಸ್ಟಿಕ್ ಪ್ಯಾಕ್ ಗುಟ್ಕಾ ನಿಷೇಧ :ಸುಪ್ರೀಂಕೋರ್ಟ್
ನವದೆಹಲಿ,
ಡಿ.7: ಗುಟ್ಕಾ ಹಾಗೂ ಪಾನ್ ಮಸಾಲದಂತಹ ತಂಬಾಕು ಉತ್ಪನ್ನಗಳನ್ನು ಪ್ಲಾಸ್ಟಿಕ್ ಪ್ಯಾಕ್ ಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ. ಮಾರ್ಚ್ 2011ರಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. id="toptextpromo">ತಂಬಾಕು
ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಿ ಎಂಟು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. ನ್ಯಾ. ಜಿ.ಎಸ್ ಸಿಂಘ್ವಿ ಹಾಗೂ ಎ.ಎ. ಗಂಗೂಲಿ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದ್ದು, ಮಾರ್ಚ್ ಒಳಗೆ ಈ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಪರ್ಯಾಯ ವಿಧಾನ ಕಂಡುಕೊಳ್ಳುವಂತೆ ಉತ್ಪಾದಕರಿಗೆ ಸೂಚನೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಸಿಗರೇಟ್ ಪ್ಯಾಕ್ ಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಪೇಪರ್ ಪ್ಯಾಕ್ ಗಳಲ್ಲೆ ಲಭ್ಯವಾಗಲಿದೆ. ತಂಬಾಕು ಉತ್ಪನ್ನಗಳ ಮೇಲೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ಗುಟ್ಕಾ ಹಾಗೂ ಪಾನ್ ಮಸಾಲ ಘಟಕಗಳನ್ನು ಮುಚ್ಚುವ ಸ್ಥಿತಿಗೆ ತಲುಪುವ ಭಯ ಎದುರಾಗಿದೆ. ಇದಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿ 2009ಗಳನ್ನು ರಾಜ್ಯಗಳಲ್ಲಿ ಸೂಕ್ತವಾಗಿ ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಅಪೆಕ್ಸ್ ಕೋರ್ಟ್ ಸೂಚಿಸಿದೆ.











Click it and Unblock the Notifications