ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾ ಪಂಚಾಯತಿ ಚುನಾವಣೆ ದಿನಾಂಕ ಘೋಷಣೆ

By Mahesh
|
Google Oneindia Kannada News

State election commisioner CR Chikkamath
ಬೆಂಗಳೂರು, ಡಿ.6 : ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ ಡಿ.26 ಹಾಗೂ ಡಿ.31 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಜನವರಿ 15ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿರುವ ಆಯೋಗ ಜ.4ರಂದು ಮತ ಎಣಿಕೆ ನಡೆಸಲಿದೆ. ಇಂದು ಮಧ್ಯರಾತ್ರಿಯಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಚಿಕ್ಕಮಠ್ ಹೇಳಿದರು.

ರಾಜ್ಯದ 30 ಜಿಲ್ಲಾ ಪಂಚಾಯತಿಗಳ 1013 ಕ್ಷೇತ್ರಗಳಿಗೆ ಹಾಗೂ 176 ತಾಲೂಕು ಪಂಚಾಯತಿಗಳ 3,400 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲೆಗಳ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ಮುಗಿದಿದೆ. ಅತಿ ಹಿಂದುಳಿದ ಜನಾಂಗದವರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಸಂಬಂಧ ಅಗತ್ಯ ಕ್ರಮ ಕೈಗೊಂಡು ಡಿ.10ರ ನಂತರ ಚುನಾವಣಾ ದಿನಾಂಕ ಪ್ರಕಟಿಸುವಂತೆ ಹೈಕೋರ್ಟ್ ನೀಡಿದ ಸೂಚನೆಯನ್ನು ಆಯೋಗ ಬದಿಗೊತ್ತಿದೆ.

15 ಜಿಲ್ಲೆಗಳ 16,242 ಮತಗಟ್ಟೆಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಹೈಕೋರ್ಟ್ ತೀರ್ಪಿನ ನಂತರ ದಾವಣಗೆರೆ, ಹಾವೇರಿ ಹಾಗೂ ಗದಗ ಜಿಲ್ಲೆ ಚುನಾವಣೆ ನಡೆಸುವ ಸಾಧ್ಯತೆಯಿದೆ. ಎರಡನೇ ಹಂತದಲ್ಲಿ ಉಳಿದ ಜಿಲ್ಲೆ ಹಾಗೂ ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ ಎಂದು ಚಿಕ್ಕಮಠ್ ಹೇಳಿದರು.

English summary
Karnataka State Election Commission announces dates for Zilla and Taluk Panchayat Elections 2010 in Karnataka. Elections to be held in two phases on Dec.26 and Dec.31 and followed by counting of votes scheduled on Jan.4 said Election commissioner CR Chikkamath today(Dec.6)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X