ಅಕ್ರಮ ಆಸ್ತಿ ಪತ್ತೆಯಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವೆ

HD Kumaraswamy in Koratagere
ಕೊರಟಗೆರೆ(ತುಮಕೂರು), ಡಿ. 6 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದವರು ಅಕ್ರಮ ಆಸ್ತಿ ಮಾಡಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಾಬೀತುಪಡಿಸಿದರೆ ಸಾರ್ವಜನಿಕರ ಮುಂದೆ ಬಹಿರಂಗವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಕೊರಟಗೆರೆ ತಾಲ್ಲೂಕು ಕೋಳಾಲದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪತ್ರಿಕೆಗಳಲ್ಲಿ ಆಸ್ತಿ ವಿವರಣೆಯನ್ನು ಜಾಹೀರಾತು ನೀಡುವ ಮೂಲಕ ತಮ್ಮ ಕುಟುಂಬವನ್ನು ಬೆದರಿಸಲು ಯಡಿಯೂರಪ್ಪ ಪ್ರಯತ್ನ ನಡೆಸಿದ್ದಾರೆ. ಅವರು ಇನ್ನೂ ಹತ್ತು ಜನ್ಮವೆತ್ತಿ ಬಂದರೂ ದೇವೇಗೌಡರ ಕುಟುಂಬವನ್ನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಖಾರವಾಗಿ ಉತ್ತರಿಸಿದರು.

ಇದಕ್ಕೂ ಮುನ್ನ ಅಭಿನಂದನೆ ಸ್ವೀಕರಿಸಿ ಕುಮಾರಸ್ವಾಮಿ ಮೈಕ್ ಬಳಿ ಬರುತ್ತಿದ್ದಂತೆಯೇ ವೇದಿಕೆ ಮುಂಭಾಗದಲ್ಲಿದ್ದ ವಯೋವೃದ್ಧಿರೊಬ್ಬರು ಮಾತನಾಡುವ ಇಚ್ಛೆ ವ್ಯಕ್ತಪಡಿಸಿದರು. ಇದನ್ನು ಗಮನಿಸಿದ ಕುಮಾರಸ್ವಾಮಿ ಅವರನ್ನು ವೇದಿಕೆ ಮೇಲೆ ಬರಮಾಡಿಕೊಂಡರು. ಈ ವಯೋವೃದ್ಧರು ಸಮಸ್ಯೆ ಹೇಳಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಅಂದಾಜಿಸಿದ್ದರು.

ಆದರೆ, ಈ ವಯೋವೃದ್ಧ ದೇಶವನ್ನು ಆಳಿದವರು ಯಾರು ಎಂದು ಕುಮಾರಸ್ವಾಮಿಯನ್ನು ಏರು ದನಿಯಲ್ಲಿ ಕೇಳಿದರು. ಆಗ ಸ್ವಲ್ಪ ವಿಚಲಿತರಾದ ಕುಮಾರಸ್ವಾಮಿ, ಸ್ವಾತಂತ್ರ್ಯಪೂರ್ವದಲ್ಲೋ, ಸ್ವಾತಂತ್ರ್ಯ ನಂತರದಲ್ಲೋ ಎಂದು ವೃದ್ಧರನ್ನು ಪ್ರಶ್ನಿಸಿದರು. ನಂತರ ರಾಜಕಾರಣಿಗಳ ಭ್ರಷ್ಟಾಚಾರ, ರಾಜಕೀಯ ವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಮೇಲಿದ್ದವರು ಮೈಕ್ ಆಪ್ ಮಾಡಿ ಕುಮಾರಸ್ವಾಮಿ ಅವರ ಮುಜುಗರದ ಪ್ರಸಂಗಕ್ಕೆ ತೆರೆಎಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+