ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆ ಅವ್ಯಾಹತ: ಗಣೇಶ್
ಬಳ್ಳಾರಿ,
ಡಿ.6: ಸಚಿವ ಜಿ. ಜನಾರ್ದನರೆಡ್ಡಿ ಅವರ ವ್ಯವಸ್ಥಾಪಕ ನಿರ್ದೇಶಕತ್ವದ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್, ಅಂತರ್ ಗಂಗಮ್ಮ ಮೈನಿಂಗ್ ಕಂಪನಿ, ಅನಂತಪುರಂ ಮೈನಿಂಗ್ ಕಾರ್ಪೋರೇಷನ್ ಯಂತ್ರೋಪಕರಣಗಳ ಪರವಾನಿಗೆ ಪಡೆಯದೇ ಆಂಧ್ರ ಪರ್ಮಿಟ್‌ಗಳ ಮೂಲಕ ಕರ್ನಾಟಕದ 6660 ಲಕ್ಷ ಪ್ರಮಾಣದ ಅದಿರನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಸರ್ಕಾರಕ್ಕೆ ವಂಚಿಸಿವೆ ಎಂದು ತುಮಟಿ ಮೈನಿಂಕ್ ಕಂಪನಿ ಗುತ್ತಿಗೆದಾರ ಟಪಾಲ್ ಗಣೇಶ್ ಆರೋಪಿಸಿದ್ದಾರೆ. id="toptextpromo">ಭಾನುವಾರ
ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ನಡೆಸಲು ಬಳಸುವ ಭಾರೀ ವಾಹನಗಳಿಗೆ ಆಯಾ ಸರ್ಕಾರದ ಮೂಲಕ ಪರವಾನಿಗೆ ಪಡೆಯಬೇಕು. ಅಲ್ಲದೇ, ಮೈನ್ಸ್ ಸೇಪ್ಟಿ, ಇನ್ನಿತರೆ ಇಲಾಖೆಗಳಿಗೂ ಈ ಎಲ್ಲಾ ವಾಹನಗಳ ಮಾಹಿತಿಯನ್ನು ಅಧಿಕೃತವಾಗಿಯೇ ಸಲ್ಲಿಸಬೇಕು. ಆದರೆ, ಈ ಎಲ್ಲಾ ವಾಹನಗಳನ್ನು ಅನಧಿಕೃತವಾಗಿಯೇ ಬಳಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. id='are-slot-1' class='oiad oi-axt oiadv'> id='top-searched-articles'>ಅಷ್ಟೇ
ಅಲ್ಲ, ಮೇಲ್ಕಾಣಿಸಿದ ಕಂಪನಿಗಳು ಕರ್ನಾಟಕದ ಕಬ್ಬಿಣದ ಅದಿರನ್ನು ಆಂಧ್ರ ಸರ್ಕಾರದ ಪರ್ಮಿಟ್‌ಗಳನ್ನು ಬಳಕೆ ಮಾಡುವ ಮೂಲಕ ವಿದೇಶಗಳಿಗೆ ರಪ್ತು ಮಾಡಲು ವಿವಿಧ ಬಂದರುಗಳಿಗೆ ರವಾನೆ ಮಾಡಿದ್ದಾರೆ. ಈ ಮೂಲಕ ಕೋಟ್ಯಾಂತರ ರುಪಾಯಿಗಳ ಅಕ್ರಮ ಹಣ ಗಳಿಸಿದ್ದಾರೆ. ಈ ಹಣದ ಮೂಲಕ ಕರ್ನಾಟಕದ ರಾಜಕೀಯದಲ್ಲಿ ಪ್ರಭಾವಿಗಳಾಗಿ ರೂಪುಗೊಂಡಿದ್ದಾರೆ ಎಂದು ಹೇಳಿದ್ದಾರೆ.











Click it and Unblock the Notifications