ಪುತ್ತೂರು ಮಲ್ಲಿಗೆ ಎಂಎಂಎಸ್ ಯುವತಿ ಲೋಕಲ್ ಅಲ್ಲ

Posted By:
Subscribe to Oneindia Kannada
Puttur Mallige Scandal
ಪುತ್ತೂರು, ಡಿ.1: ಕೆಲ ತಿಂಗಳಿನಿಂದ ಪುತ್ತೂರಿನಾದ್ಯಂತ ಸಂಚಲನ ಮೂಡಿಸಿದ್ದ 'ಪುತ್ತೂರು ಮಲ್ಲಿಗೆ ಎಂಬ ಬ್ಲೂಫಿಲಂ ಸಿ.ಡಿ. ನಕಲಿ ಎಂದು ಪುತ್ತೂರು ನಗರ ಪೊಲೀಸರು ದೃಢಪಡಿಸಿದ್ದಾರೆ. ಸ್ಥಳೀಯ ಪ್ರತಿಭಾವಂತ ಕಾಲೇಜು ವಿದ್ಯಾರ್ಥಿನಿಯ ಹೆಸರು ಕೆಡಿಸಲು ಕಿಡಿಗೇಡಿಗಳು 'ಪಂಜಾಬ್‌ನಲ್ಲಿ ಸಿಕ್ಖನೋರ್ವ ಪ್ರಿಯತಮೆಯೊಂದಿಗೆ ನಡೆಸಿದ ರಾಸಲೀಲೆ ದೃಶ್ಯಕ್ಕೆ ಪುತ್ತೂರಿನ ಯುವತಿಯ ಹೆಸರನ್ನು ಬಳಸಿದ್ದಾರೆಎಂದು ತನಿಖೆಯಿಂದ ತಿಳಿದುಬಂದಿದೆ.

ಪುತ್ತೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ ಕಾಲೇಜಿನಲ್ಲಿ ಕಲಿಕೆಯಲ್ಲಿ ಮುಂದಿದ್ದಾಳೆ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿ, ಈ ಟಿವಿಯ "ಸೈ ಟು ಡ್ಯಾನ್ಸ್ ಶೋ" ನಲ್ಲಿ ಫೈನಲ್ ವರೆಗೆ ಹೋಗಿದ್ದಳು. ಈಕೆಯ ಸಾಧನೆಯನ್ನು ಸಹಿಸದ ದುಷ್ಕರ್ಮಿಗಳು ಪಂಜಾಬ್ ಮೂಲದವರು ನಡೆಸಿದಂತಹ ರಾಸಲೀಲೆಯ ವಿಡಿಯೋ ತುಣುಕುಗಳಿಗೆ ಈಕೆಯ ಹೆಸರನ್ನಿಟ್ಟು ವಿಕೃತ ಸಂತಸವನ್ನು ಪಡೆದಿದ್ದರು.

ಸುದ್ದಿ ಮಾಧ್ಯಮಗಳಲ್ಲಿ ವಿಡಿಯೋ ಬಹಿರಂಗವಾದ ಮೇಲೆ ಎಚ್ಚೆತ್ತುಕೊಂಡ ಪುತ್ತೂರು ಪೊಲೀಸರು ಆರೋಪ ಹೊರಿಸಲಾಗಿದ್ದ ಯುವತಿಯ ಮನೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ನಂತರ ತನಿಖೆ ತೀವ್ರಗೊಳಿಸಿ ಸುಮಾರು ಒಂದು ಗಂಟೆವರೆಗೆ ನಡೆದಿರುವ ರಾಸಲೀಲೆಯ ನೈಜ ಸಿ.ಡಿ. ಸಂಗ್ರಹಿಸಿದ್ದಾರೆ.

ಸಿಡಿಯನ್ನು ಪರಿಶೀಲಿಸಿದಾಗ ಅದರಲ್ಲಿ ಸಿಖ್ ಸಮುದಾಯದ ಯುವಕನೊಬ್ಬ ಹಾಗೂ ಆತನ ಪ್ರಿಯತಮೆಯ ಸರಸ ಕ್ರೀಡೆಗಳಿದ್ದವು. ಇದೇ ವೀಡಿಯೋ ತುಣುಕುಗಳನ್ನು ಎಡಿಟ್ ಮಾಡಿ ಪುತ್ತೂರಿನ ಯುವತಿಯ ಹೆಸರನ್ನು ಕೆಡಿಸಲು ಬಳಸಲಾಗಿರುವ ಅಂಶ ಬೆಳಕಿಗೆ ಬಂದಿತು. ಇದೀಗ ಸಿ.ಡಿ. ತಯಾರಿಸಿರುವವರ ಬೆನ್ನುಬಿದ್ದಿರುವ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಲ್ಲದೆ ಶೀಘ್ರವೇ ಬಂಧಿಸಲಿರುವುದಾಗಿ ಹೇಳಿದ್ದಾರೆ.

ಮಲ್ಲಿಗೆ ಪರಿಮಳ:
ಮೈಸೂರು ಮಲ್ಲಿಗೆ ಇದ್ದಂತೆ ಭಟ್ಕಳ, ಪಡುಬಿದ್ರಿ, ಕುಪ್ಪೆಪದವು, ವಾಮಂಜೂರು, ಸುಳ್ಯ, ಮಂಗಳೂರು, ಉಡುಪಿ, ಕುಂದಾಪುರ ಹೀಗೆ ನಾನಾ ಊರುಗಳ ಹೆಸರಿನ ಮಲ್ಲಿಗೆಗಳು(ಸೆಕ್ಸ್ ಕ್ಲಿಪಿಂಗ್ಸ್) ರಾಜ್ಯದೆಲ್ಲೆಡೆ ಹರಡಿದ್ದವು. ಇದಕ್ಕೆ ಇತ್ತೀಚೆಗೆ ಉಜಿರೆ ಮಲ್ಲಿಗೆ ಹಾಗೂ ಪುತ್ತೂರು ಮಲ್ಲಿಗೆ ಸೇರ್ಪಡೆಯಾಗಿದ್ದವು.[ಕ್ರೈಂ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Puttur Mallige Sex Scandal video involving sensual scenes of a college girl with a sikh guy is found to be fake. Puttur town police confirms "It is no way connected to Puttur college girl whose name appeared in the sensual video. It is clearly trick of some miscreants".
Please Wait while comments are loading...