ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಕಾರ್ಯದರ್ಶಿ ಮನೆ ಮೇಲೆ ಜೆಡಿಎಸ್ ದಾಳಿ

By Rajendra
|
Google Oneindia Kannada News

BJ Puttaswamy house attacked
ಬೆಂಗಳೂರು, ಡಿ.1: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ ಜೆ ಪುಟ್ಟಸ್ವಾಮಿ ಅವರ ವೈಯಾಲಿಕಾವಲ್ ಮನೆ ಮೇಲೆ ಜಾತ್ಯಾತೀತ ಜನತಾದಳದ ಕಾರ್ಯಕರ್ತರೆಂದು ಹೇಳಿಕೊಂಡು ಬಂದ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ, ಮನೆಯ ಕಿಟಕಿ ಬಾಗಿಲು, ಕಾರಿನ ಗಾಜನ್ನು ಒಡೆದು ಹಾಕಿ ದಾಂಧಲೆ ನಡೆಸಿದ್ದಲ್ಲದೆ ಪುಟ್ಟಸ್ವಾಮಿ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ.

ಮಂಗಳವಾರ (ನ.30) ರಾತ್ರಿ ಸುಮಾರು 10 .20ರ ಸುಮಾರಿಗೆ ಈ ಘಟನೆ ನಡೆದಿದೆ. ಖಾಸಾಗಿ ವಾಹಿನಿಯಲ್ಲಿ ಕುಮಾರಸ್ವಾಮಿ ಮತ್ತು ಪುಟ್ಟಸ್ವಾಮಿ ನಡುವೆ ನಡೆದ ಕೀಳುಮಟ್ಟದ ಮಾತಿನ ಚಕಮಕಿಯ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ. ಭೂ ಹಗರಣದ ವಿಷಯದಲ್ಲಿ ನಡೆದ ಚರ್ಚೆಯ ಸಮಯದಲ್ಲಿ "ನೀವು ನಿಮ್ಮ ವಂಶಸ್ಥರಿಗೆ ಹುಟ್ಟಿದ್ದೇ ಆದರೆ ರಾಜಕೀಯದಿಂದ ನಿವೃತ್ತಿಯಾಗಿ, ನಾನು ನನ್ನ ವಂಶಸ್ಥರಿಗೆ ಹುಟ್ಟಿದ್ದೇ ಆದಲ್ಲಿ ನಾನು ನನ್ನ ಈ ಹುದ್ದೆಗೆ ರಾಜೀನಾಮೆ ನೀಡುತ್ತೇನೆ" ಎಂದು ಪುಟ್ಟಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ನೀವು "ಪಾಪರ್ ಚೀಟಿ" ಆಗಿದ್ದೀರಿ ಎನ್ನುವ ಎಚ್ ಡಿ ಕೆ ಮಾತಿನಿಂದ ಕೆರಳಿ ಪುಟ್ಟಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

ರಾಜಕೀಯದಲ್ಲಿ ವೈಯಕ್ತಿಕ ದ್ವೇಷ ಸಾಧನೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಜೆಡಿಎಸ್ ಮುಖಂಡರು ಈ ರೀತಿ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ. ಮನೆ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲೆತ್ನಿಸಿದರು. ಅಂಗರಕ್ಷಕರ ನೆರವಿನಿಂದಾಗಿ ನಾನು ಪ್ರಾಣಾಪಾಯದಿಂದ ಪಾರಾದೆ ಎಂದು ಪುಟ್ಟಸ್ವಾಮಿ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಪರವಾಗಿ ಜೈಕಾರ ಹಾಕುತ್ತಿದ್ದ ಕಿಡಿಗೇಡಿಗಳು ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಲೆತ್ನಿಸಿದರು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಅವರಲ್ಲಿ ಕೆಲವರನ್ನು ಬಂಧಿಸಲಾಯಿತು. ಘಟನೆ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಬಂಧಿತರು ಜೆಡಿಎಸ್ ಕಾರ್ಯಕರ್ತರೆಂದು ವಿಚಾರಣೆ ವೇಳೆ ತಿಳಿಸಿದರೆಂದು ಪೊಲೀಸರು ವಿವರ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಪ್ತಚರ ದಳದ ಐಜಿಪಿ ಗೋಪಾಲ್ ಬಿ.ಹೊಸೂರ್ 'ಈ ಕೃತ್ಯ ಎಸಗಿರುವ ಎಲ್ಲ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗುತ್ತದೆ" ಎಂದು ಹೇಳಿದ್ದಾರೆ. ಗೃಹ ಸಚಿವ ಆರ್ ಅಶೋಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

English summary
Chief Minister"s political secretary B J Puttaswamy alleged that, Over 80 members of the JD(S) attacked his house and damaged two cars, including a government vehicle. The mob chanted slogans asking that the secretary be killed and damaged two cars, including a government vehicle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X