ಫೆ 12ರೊಳಗೆ ಸರ್ಕಾರಕ್ಕೆ ಗಂಡಾಂತರ : ಕೋಡಿಮಠ ಶ್ರೀ
ಅರಸೀಕೆರೆ,
ನ.30 : "ನೀಚನಿಗೆ ದೊರೆತನ, ಹೇಡಿಗೆ ಹಿರಿತನ, ಅವಿವೇಕಿಗೆ ಮಠಾಧಿಪತಿ ಸ್ಥಾನ ಸಿಕ್ಕರೆ ನಾಡು ಹೇಗಿರುತ್ತೋ ನಮ್ಮ ನಾಡು ಕೂಡಾ ಹಾಗೆ ಇದೆ". ಹಲವು ಬಾರಿ ಸರಕಾರ ಗಂಡಾಂತರದಿಂದ ಪಾರಾಗಿದೆ. ಬರುವ ಫೆಬ್ರವರಿ 12ರೊಳಗೆ ಯಡಿಯೂರಪ್ಪ ಅವರಿಗೆ ಮತ್ತೆ ಸಂಕಟ ಕಾದಿದೆ. ಅವರು ಅಲ್ಲಿಯವರೆಗೆ ಅಧಿಕಾರದಲ್ಲಿರುವುದು ಅನುಮಾನ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. id="toptextpromo">ಮುಖ್ಯಮಂತ್ರಿ
ಆದವರು ಒಂದು ವರ್ಗದ ಜನರಿಗೆ ನಾಯಕರಾಗಲು ಸಾಧ್ಯವಿಲ್ಲ. ಅವರು ಆರು ಕೋಟಿ ಜನರ ಸ್ವತ್ತು. ಕೆಲ ಮಠಾಧೀಶರು ಮತ್ತು ಮುಖ್ಯಮಂತ್ರಿಗಳು ಲಿಂಗಾಯಿತ ಸಮುದಾಯವೇ ಮುಖ್ಯ ಎಂಬಂತೆ ಬಿಂಬಿಸಿ ಕೊಳ್ಳುತ್ತಿರುವುದು ತಪ್ಪು. ಯಡಿಯೂರಪ್ಪ ಅವರ ಸರಕಾರ ಈಗೀಗ ಹಲವು ಕಂಟಕಗಳಿಂದ ನಲುಗುತ್ತಿರುವುದಕ್ಕೆ ಅಪ್ರಾಮಾಣಿಕ ಆಡಳಿತವೇ ಕಾರಣ ಎಂದು ಕೋಡಿಮಠದ ಸ್ವಾಮೀಜಿ ವಿಷಾದಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸ್ವಾರ್ಥರಹಿತ
ಸೇವಾಗುಣವನ್ನು ಹೊಂದಿರುವ ಆರ್ ಎಸ್ ಎಸ್ ಮುಖ್ಯಮಂತ್ರಿಗಳ ಅಸಮರ್ಪಕ ಆಡಳಿತ ನೋಡಿ ಸುಮ್ಮನಿದ್ದಾರೆಂದರೆ ಆಶ್ಚರ್ಯವಾಗುತ್ತದೆ. ಸಿಎಂ ನಮ್ಮ ಮಠಕ್ಕೆ ಬರುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ನಮ್ಮ ಮಠದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಇದಕ್ಕೆ ತಾವಾಗಲಿ ನಮ್ಮ ಭಕ್ತರಾಗಲಿ ಗಮನ ನೀಡಿಲ್ಲ. ನಾಡಿನ ಎಲ್ಲರಿಗೂ ಮಠಕ್ಕೆ ಬಂದು ಹೋಗಲು ಅವಕಾಶವಿದೆ. ಕೆಲ ಮಠಾಧೀಷರು ರಾಜಕೀಯ ಪಕ್ಷದ ವಕ್ತಾರರಂತೆ ಮಾತನಾಡುವುದು ಬೇಡ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.











Click it and Unblock the Notifications