ಮಂಡ್ಯದಲ್ಲಿ ಎಚ್ ಐವಿ ಸೋಂಕಿತರ ಲೆಕ್ಕ ಸಿಕ್ಕಿದೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜ.1ರಿಂದ ಅ.30 ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 19,726ಮಂದಿ ರಕ್ತ ಪರೀಕ್ಷೆಗೊಳಪಟ್ಟಿದ್ದು, ಈ ಪೈಕಿ 6,950 ಮಂದಿಯಲ್ಲಿ ಎಚ್‌ಐವಿ ಪತ್ತೆಯಾಗಿದೆ ಎಂದರು.
15,075 ಗರ್ಭಿಣಿಯರನ್ನು ರಕ್ತ ಪರೀಕ್ಷೆಗೊಳಪಡಿಸಿದಾಗ 47 ಮಂದಿ ಎಚ್‌ಐವಿ ಪೀಡಿತರಾಗಿದ್ದರು. ಈ ಪೈಕಿ 33 ಮಂದಿಗೆ ಹೆರಿಗೆಯಾಗಿದ್ದು, 28 ಮಕ್ಕಳಿಗೆ ಎಚ್‌ಐವಿ ಬಾರದಂತೆ ಚಿಕಿತ್ಸೆ ನೀಡಿದ್ದು, ಆ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವಿನಾಯಕ ಅವರು ವಿವರಿಸಿದರು.
ಎಚ್‌ಐವಿ ಸೋಂಕಿತ ರೋಗಿಗಳ ಸಂಖ್ಯೆಯಲ್ಲಿ ಮಂಡ್ಯ ಜಿಲ್ಲೆ 16ನೆ ಸ್ಥಾನದಲ್ಲಿದ್ದು, ಬಾಗಲ ಕೋಟೆ ಪ್ರಥಮ, ಬಿಜಾಪುರ ದ್ವಿತೀಯ ಹಾಗೂ ಬೆಳಗಾವಿ ಮೂರನೆ ಸ್ಥಾನದಲ್ಲಿವೆ ಎಂದು ವಿನಾಯಕ ಹೇಳಿದರು.
ಏಡ್ಸ್ ನಿಯಂತ್ರಣಕ್ಕಾಗಿ ಮೈರಾಡ, ಆದರ್ಶ, ಆಶೋದಯ, ಆಶಾಕಿರಣ (ಮಕ್ಕಳಿಗೆ ಸಂಬಂಧಪಟ್ಟಂತೆ), ಮ್ಯಾಪ್ಸ್ (ಲೈಂಗಿಕ ಕಾರ್ಯಕರ್ತೆಯರಿಗಾಗಿ) ಸಂಸ್ಥೆಗಳು ಏಡ್ಸ್ ನಿಯಂತ್ರಣ ಹಾಗೂ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿವೆ ಎಂದು ವಿನಾಯಕ ತಿಳಿಸಿದರು.
ವಿಶ್ವ ಏಡ್ಸ್ ದಿನಾಚರಣೆ: ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ವತಿಯಿಂದ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದ್ದು, ತಾಲೂಕಿನ ವಿವಿಧ ಕಾಲೇಜುಗಳಲ್ಲಿ ಡಿ.2ರಿಂದ 7ರ ವರೆಗೆ ಏಡ್ಸ್ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿನಾಯಕ ಹೇಳಿದರು.












Click it and Unblock the Notifications