ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿಗೆ DIN ಸಂಖ್ಯೆ ಕಡ್ಡಾಯ

By Mahesh
|
Google Oneindia Kannada News

DIN will be mandatory for all Taxpayers
ನವದೆಹಲಿ, ನ.29: ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸರಳ ಹಾಗೂ ಪಾರದರ್ಶಕಗೊಳಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ತೆರಿಗೆ ಪಾವತಿ ಸಂದರ್ಭದಲ್ಲಿ ಇಲಾಖೆಯೊಡನೆ ವ್ಯವಹಾರ ನಡೆಸಲು ಪ್ಯಾನ್ ಹಾಗೂ ಟ್ಯಾನ್ ಕಾರ್ಡ್ ಗಳ ಜೊತೆಗೆ ಹೊಸದಾಗಿ ಚಾಲ್ತಿಗೆ ಬಂದಿರುವ "ಡಿನ್"(Document identification number) ಬಳಕೆ ಕಡ್ಡಾಯಗೊಳಿಸಲು ಇಲಾಖೆ ನಿರ್ಧರಿಸಿದೆ.

ನೇರ ತೆರಿಗೆ ಕೇಂದ್ರೀಯ ಮಂಡಳಿ(CBDT) ನೀಡಿರುವ ನಿರ್ದೇಶನದಂತೆ ತೆರಿಗೆದಾರರ ಜೊತೆ ಇಲಾಖೆ ನದೆಸುವ ಎಲ್ಲಾ ವ್ಯವಹಾರಗಳಲ್ಲಿ ಡಿನ್ ನ್ನು ಉಲ್ಲೇಖಿಸಬೇಕಾಗುತ್ತದೆ. ಈ ಸಂಖ್ಯೆ ಪಡೆಯಲು ತೆರಿಗೆದಾರರು ಕಷ್ಟಪಡಬೇಕಾಗಿಲ್ಲ. ಶೀಘ್ರದಲ್ಲೇ ಆದಾಯ ತೆರಿಗೆ ಕೇಂದ್ರಗಳು ಡಿನ್ ನೀಡಲು ಆರಂಭಿಸಲಿದೆ.

ಸದ್ಯಕ್ಕೆ ತೆರಿಗೆದಾರರು ಶಾಶ್ವತ ಖಾತೆ ಸಂಖ್ಯೆ(PAN) ಹಾಗೂ ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ(TAN) ಅನ್ನು ಉಲ್ಲೇಖಿಸುತ್ತಿದ್ದಾರೆ. ಇದರ ಜೊತೆಗೆ DIN ಅನ್ನು ಕೂಡಾ ಬಳಸಬೇಕಾಗುತ್ತದೆ. ಇದರಿಂದ ನೂನ್ಯತೆಗಳಿಲ್ಲದೆ ತೆರಿಗೆ ಪಾವತಿಸಲು, ಪಾವತಿ ಹಿಂಪಡೆಯಲು ಹಾಗೂ ಇನ್ನಿತರ ಸಂವಹನ ಕ್ರಿಯೆಗಳಲ್ಲಿ ಅನುಕೂಲವಾಗಲಿದೆ ಎಂದು ಇಲಾಖೆ ಪ್ರಕಟಿಸಿದೆ.

English summary
Income Tax department has introduced a unique Document identification number (DIN), like PAN and TAN. Tax Payers now have to produce DIN in order to make any communication with the Income Tax department. DIN will be mandatory for all Taxpayers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X