ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 13ನೇ ಚಿನ್ನ ದಕ್ಕಿಸಿಕೊಟ್ಟ ಕನ್ನಡತಿ ಅಶ್ವಿನಿ

By Prasad
|
Google Oneindia Kannada News

Ashwini Chidananda
ಗುವಾಂಗ್ ಜೂ, ನ. 26 : ಉಡುಪಿ ಜಿಲ್ಲೆಯ ಕುಂದಾಪುರದ ಚಿಗರೆ ಅಶ್ವಿನಿ ಚಿದಾನಂದ ಅವರಿದ್ದ ವನಿತೆಯರ ತಂಡ 16ನೇ ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾರತಕ್ಕೆ 13ನೇ ಚಿನ್ನವನ್ನು ತಂದುಕೊಟ್ಟಿದೆ. 4X400 ಮೀಟರ್ ರಿಲೆಯಲ್ಲಿ ಜಯ ಸಾಧಿಸಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಇದು ಐದನೇ ಚಿನ್ನ. ಅಶ್ವಿನಿ ಚಿದಾನಂದ (ಅಶ್ವಿನಿ ಶೆಟ್ಟಿ ಕಕ್ಕುಂಜೆ) ಅವರು 400 ಮೀಟರ್ ಹರ್ಡಲ್ಸ್ ನಲ್ಲಿ ಬಂಗಾರದ ಪದಕ ಗಳಿಸಿದ್ದರು.

ಶುಕ್ರವಾರ ನಡೆದ ಅತ್ಯಂತ ರೋಚಕ ಸ್ಪರ್ಧೆಯಲ್ಲಿ ಭಾರತದ ಮಂಜಿತ್ ಕೌರ್, ಸಿನಿ ಜೋಸ್, ಅಶ್ವಿನಿ ಚಿದಾನಂದ ಮತ್ತು ಮನದೀಪ್ ಕೌರ್ ಅವರಿದ್ದ ರಿಲೆ ತಂಡ ಕಜಕ್ ಸ್ತಾನನನ್ನು ಹಿಂದಿಕ್ಕಿ ಗುರಿ ತಲುಪಿತು. ಚೀನಾ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಇದೇ ಭಾರತದ ತಂಡ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕ ಗಳಿಸಿತ್ತು.

ಮಂಜಿತ್ ಕೌರ್ ಉತ್ತಮ ಆರಂಭ ದೊರಕಿಸಿಕೊಟ್ಟರೆ, ಸಿನಿ ಜೋಸ್ ಅದೇ ವೇಗ ಕಾಯ್ದುಕೊಂಡರು. ಕನ್ನಡದ ಕುವರಿ ಅಶ್ವಿನಿ ಭರ್ಜರಿಯಾಗಿ ಓಡಿ ಕಜಕ್ ನ ಮಾರ್ಗರಿಟಾರನ್ನು ಸಾಕಷ್ಟು ಹಿಂದೆ ಉಳಿಸಿದರು. ಮನದೀಪ್ ಕೈಯಲ್ಲಿ ಬೇಟನ್ ಬಂದಾಗ ಗೆಲುವು ಸುಲಭವೆಂದೇ ಭಾವಿಸಲಾಗಿತ್ತು. ಆದರೆ, ಕಜಕ್ ನ ಓಲ್ಗಾ ತುರುಸಿನ ಸ್ಪರ್ಧೆ ನೀಡಿ ಅಂತರವನ್ನು ಕಡಿಮೆ ಮಾಡಿದರು. ಆದರೆ, ಕೊನೆಯ 50 ಮೀಟರ್ ಇದ್ದಾಗ ವೇಗವನ್ನು ಹೆಚ್ಚಿಸಿಕೊಂಡ ಮನದೀಪ್ ಭಾರತದ ಜನತೆಯ ಹರ್ಷ ಮುಗಿಲು ಮುಟ್ಟುವಂತೆ ಮಾಡಿದರು.

English summary
Asian Games 2010 : Indian women relay team with Manjit Kaur, Sini Joseph, Ashwini Chidananda and Mandeep Kaur win gold medal. The same relay team had won Gold medal at recently concluded Commonwealth Games too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X