ರೋಸಯ್ಯ ಕರ್ನಾಟಕ ರಾಜ್ಯಪಾಲ?
ಬೆಂಗಳೂರು,
ನ. 25 : ನಿನ್ನೆ ತಾನೇ ಆಂಧ್ರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ರೋಸಯ್ಯ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದೊಂದು ಪೂರ್ವ ನಿಯೋಜಿತ ಬೆಳವಣಿಗೆ ಎಂದು ಕಾಂಗ್ರೆಸ್ ವಲಯ ಹೇಳುತ್ತದೆ. id="toptextpromo">ಕರ್ನಾಟಕದ
ಪ್ರಸಕ್ತ ರಾಜ್ಯಪಾಲರಾಗಿರುವ ಎಚ್ ಆರ್ ಭಾರದ್ವಾಜ್ ಅವರು ಇತ್ತೀಚೆಗೆ ದೆಹಲಿಯಲ್ಲಿ ರೋಶಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಬಗ್ಗೆ ಇಬ್ಬರೂ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕರ್ನಾಟಕದ ಬಿಜೆಪಿ ಸರಕಾರದೊಂದಿಗೆ ಭಾರದ್ವಾಜ್ ಅವರು ವರ್ತಿಸುತ್ತಿರುವ ರೀತಿಯಿಂದ ವರಿಷ್ಠರು ಅಸಮಾಧಾನಗೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇತ್ತೀಚಿನ
ನಡೆದ ಬಂಡಾಯ ಶಾಸಕರ ವಿಷಯದಲ್ಲಿ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ನಡೆದುಕೊಂಡ ರೀತಿ ಸ್ವತಃ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಇದರಿಂದ ತಕ್ಷಣ ಅವರನ್ನು ಬದಲಾವಣೆ ಮಾಡುವ ಹಂತಕ್ಕೆ ಬಂದಿತ್ತು. ಆದರೆ, ಇನ್ನೊಂದು ಸುತ್ತಿನ ಮುಖಭಂಗಕ್ಕೆ ಈಡಾಗುವುದು ಬೇಡ ಎಂಬ ಕಾರಣದಿಂದ ಇಲ್ಲಿಯವರೆಗೂ ಅವರನ್ನೇ ಮುಂದುವರಿಸಿಕೊಂಡು ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಶಯ್ಯ ಅವರನ್ನು ಈ ಜಾಗಕ್ಕೆ ತರುವ ನಿಟ್ಟಿನಲ್ಲಿ ಹೈಕಮಾಂಡ್ ಚಿಂತನೆ ನಡೆಸಿದೆ.











Click it and Unblock the Notifications