ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿಹಳ್ಳಿಗಳಿಗೆ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆ

By Prasad
|
Google Oneindia Kannada News

DoT to provide wireless broadband services to villages in India
ಭಾರತದ 60 ಸಾವಿರ ಹಳ್ಳಿಗಳಲ್ಲಿ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆಯನ್ನು ಪ್ರಾರಂಭಿಸುವ ಉದ್ದೇಶದಿಂದ ದೂರಸಂಪರ್ಕ ಇಲಾಖೆ ಹರಾಜಿಗೆ ಆಹ್ವಾನ ನೀಡಲು ಯೋಚಿಸುತ್ತಿದೆ ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ. ಇದನ್ನು ಯುನಿವರ್ಸಲ್ ಸರ್ವೀಸಸ್ ಆಬ್ಲಿಗೇಷನ್ ಫಂಡ್ ಸಹಕಾರದೊಂದಿಗೆ ಮಾಡುತ್ತಿದೆ.

ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆ ಇಲ್ಲದಂತಹ ಗ್ರಾಮದಲ್ಲಿ ಒಬ್ಬ ಆಪರೇಟರ್ ಗೆ ಹಣಕಾಸು ಸಹಾಯವನ್ನು ಒದಗಿಸಲು ಕೂಡ ದೂರಸಂಪರ್ಕ ಇಲಾಖೆ ನಿರ್ಧರಿಸಿದೆ. ಇಲಾಖೆ ಗುರುತಿಸಲಾಗಿರುವ ಈ ಹಳ್ಳಿಗಳಲ್ಲಿ ಸರಕಾರದ ಮಾಲಿಕತ್ವದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್)ದ ಸೇವೆ ಇಲ್ಲ.

ಹರಾಜಿನಲ್ಲಿ ಅತಿ ಕಡಿಮೆ ಮೊತ್ತವನ್ನು ಕೂಗಿದ ಆಪರೇಟರಿಗೆ ಈ ಯೋಜನೆ ದಕ್ಕಲಿದೆ. ಆದರೆ, ಬ್ರಾಡ್ ಬ್ಯಾಂಡ್ ವೇಗ ಮತ್ತು ಗುಣಮಟ್ಟದ ಸೇವೆ ಕುರಿತಂತೆ ಕೆಲ ನಿಯಮಗಳನ್ನು ಒಡ್ಡಲಿದೆ. ಈ ಯೋಜನೆ ಕಾರ್ಯಗತವಾದರೆ ಭಾರತದ ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ಕ್ರಾಂತಿ ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ. ಬೆರಳ ತುದಿಯಲ್ಲಿ ಗ್ರಾಮಸ್ಥರು ಮಾಹಿತಿ ತಂತ್ರಜ್ಞಾನದ ಲಾಭ ಪಡೆಯಲು ಈ ಯೋಜನೆ ಸಹಾಯಕವಾಗಲಿದೆ.

English summary
Department of Telecommunications (DoT) to provide wireless broadband service to 60,000 villages in india with the support from the Universal Services Obligation fund. The selected operators will be provided with financial assistance too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X