2011ರೊಳಗೆ ಚುನಾವಣೆ ಖಚಿತ: ಕೋಡಿಮಠ ಸ್ವಾಮೀಜಿ
ಹಾಸನ,
ನ.21: ಹಗರಣಗಳ ಸುಳಿಯಲ್ಲಿ ಸಿಲುಕಿರುವ ಯಡಿಯೂರಪ್ಪ ಅವರ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ. 2011ರ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಮತ್ತೊಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ, ಚುನಾವಣೆ ನಂತರವೂ ಅತಂತ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅಥಣಿಗೆ ತೆರಳುತ್ತಿದ್ದ ಸ್ವಾಮೀಜಿ ಹೇಳಿದ್ದಾರೆ. id="toptextpromo">ಅರಸೀಕೆರೆ
ತಾಲೂಕು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ರಾಜಕೀಯದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಕಂಡು ಬಂದಿದೆ. ರಾಜಕಾರಣ ಇನ್ನಷ್ಟು ಕಲುಷಿತವಾಗಿ, ರಾಜಕಾರಣಿಗಳು ಸ್ವಾರ್ಥಿಗಳಾಗುತ್ತಾರೆ ಎಂದಿದ್ದಾರೆ. ರಾಜಕೀಯ ವ್ಯಕ್ತಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಸಾವಿನ ಸೂತಕದ ಛಾಯೆ ಕೂಡಾ ಇದೆ. ಅಪಘಾತಗಳು ಹೆಚ್ಚಲಿವೆ. ಮಳೆ ಪ್ರಮಾಣ ಒಂದು ಭಾಗದಲ್ಲಿ ಮಾತ್ರ ಹೆಚ್ಚಿಗೆ ಕಾಣಿಸಲಿದ್ದು, ಇನ್ನೊಂದು ಭಾಗದಲ್ಲಿ ಉತ್ತಮ ಬೆಳೆ ಆಗಲಿದೆ ಎಂದು ಸ್ವಾಮೀಜಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಸಿಎಂ
ಮೇಲೆ
ಅಸಮಾಧಾನ:
ಬಿ.ಎಸ್
ಯಡಿಯೂರಪ್ಪ
ಅವರು
ಅಧಿಕಾರಕ್ಕೆ
ಬಂದು
ಎರಡೂವರೆ
ವರ್ಷವಾದರೂ
ಈವರೆಗೆ
ಕೋಡಿ
ಮಠಕ್ಕೆ
ಭೇಟಿ
ನೀಡದೆ
ಇರುವುದಕ್ಕೆ
ಶ್ರೀಗಳು
ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ಈ
ಬಗ್ಗೆ
ಇತ್ತೀಚೆಗೆ
ಮಠಕ್ಕೆ
ಭೇಟಿ
ನೀಡಿದ್ದ
ಸಚಿವ
ವಿ.ಸೋಮಣ್ಣ
ಅವರಲ್ಲಿ
ಹೇಳಿದ್ದರು
ಎನ್ನಲಾಗಿದೆ.
ಈ
ಹಿಂದೆ
ಬಿಜೆಪಿ
ಸರ್ಕಾರ
ಅಧಿಕಾರ
ಬರಲಿದೆ,
ಯಡಿಯೂರಪ್ಪ
ಸಿಎಂ
ಆಗಲಿದ್ದಾರೆ
ಎಂದು
ಕೋಡಿ
ಮಠದ
ಸ್ವಾಮೀಜಿ
ಭವಿಷ್ಯ
ನುಡಿದಿದ್ದರು.












Click it and Unblock the Notifications