ಮುಂದಿನ ವರ್ಷ ಲಂಡನ್ ರಾಜಕುಮಾರನ ಲಗ್ನ
ಲಂಡನ್,
ನ. 18 : ಬ್ರಿಟಿಷ್ ಸಿಂಹಾಸನದ ಎರಡನೇ ಉತ್ತರಾಧಿಕಾರಿಯಾದ ರಾಜಕುಮಾರ ವಿಲಿಯಂ ಮುಂದಿನ ವರ್ಷ ತಮ್ಮ ದೀರ್ಘ ಕಾಲದ ಗೆಳತಿ ಕೇಟ್ ಮಿಡ್ಲ್ ಟನ್ ಳನ್ನು ವರಿಸಲಿದ್ದಾರೆ. id="toptextpromo">ಈ
ಶತಮಾನದ ಬಹುನಿರೀಕ್ಷೆಯ ವಿಲಿಯಂ-ಕೇಟ್ ವಿವಾಹವು, 1981ರಲ್ಲಿ ಅದ್ದೂರಿಯಾಗಿ ನಡೆದ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಜಕುಮಾರಿ ಡಯಾನ ಮದುವೆ ನೆನಪುಗಳನ್ನು ಮತ್ತೆ ತರಿಸುವ ಸಾಧ್ಯತೆ ಇದೆ. ವಿಲಿಯಂ ಅವರು ಪ್ರಿನ್ಸ್ ಚಾರ್ಲ್ಸ್ ಅವರ ಹಿರಿಯ ಪುತ್ರನಾಗಿದ್ದಾರೆ. ವಿಲಿಯಂ ಹಾಗೂ ಕೇಟ್ ಇಬ್ಬರೂ 28 ವರ್ಷದವರಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಲಿಯಂ-ಕೇಟ್
ವಿವಾಹವು 2011ರಲ್ಲಿ ಬೇಸಿಗೆ ಅಥವಾ ವಸಂತ ಋತುವಿನಲ್ಲಿ ಲಂಡನ್‌ನಲ್ಲಿ ನಡೆಯಲಿದೆಯೆಂದು ರಾಜಮನೆತನದ ಮೂಲಗಳು ತಿಳಿಸಿವೆ. ಅಕ್ಟೋಬರ್ ನಲ್ಲಿ ವಿಲಿಯಂ ಹಾಗೂ ಕೇಟ್ ಕೆನ್ಯಾಕ್ಕೆ ಖಾಸಗಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಇವರಿಬ್ಬರು ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.











Click it and Unblock the Notifications