ಮಂಗಳೂರು ಪಬ್ ದಾಳಿ ತಪ್ಪು : ಮುತಾಲಿಕ್
ಪುಣೆ,
ನ. 17 : ಎರಡು ವರ್ಷಗಳ ನಂತರ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಮಂಗಳೂರಿನಲ್ಲಿ ಸೇನೆಯ ಕಾರ್ಯಕರ್ತರು ನಡೆಸಿದ ಪಬ್ ಮೇಲಿನ ದಾಳಿ ಸಂಪೂರ್ಣ ತಪ್ಪು. ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುವ ಪ್ರಕರಣ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಬ್ ಮೇಲೆ ದಾಳಿ ನಡೆಯಬಾರದಿತ್ತು. ಸಂಘಟನೆಯ ಮೇಲೆ ಇದೊಂದು ಕಪ್ಪು ಚುಕ್ಕೆ ಎಂದಿದ್ದಾರೆ. ಮಂಗಳೂರು ಪಬ್ ದಾಳಿಯಿಂದ ಶ್ರೀರಾಮಸೇನೆಯ ಮೇಲೆ ಕೆಲ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದೆ. ಹುಡುಗಿಯರ ನಡೆದ ದಾಳಿಯನ್ನು ಅಂದು ಎಲ್ಲರೂ ಖಂಡಿಸಿದರು. ಇದರಿಂದ ಕೆಲ ವರ್ಗದ ಮಹಿಳೆಯರು ಸಂಘಟನೆಯನ್ನು ನೋಡುವ ದೃಷ್ಟಿಯೇ ಬೇರೆಯಾಗಿದೆ ಎಂದು ಮುತಾಲಿಕ್ ವಿವರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಒಂದು
ಮಾತು ಸತ್ಯ, ಮಂಗಳೂರು ಪಬ್ ದಾಳಿ ಮತ್ತು ಹೆಡ್ ಲೈನ್ಸ್ ಟುಡೇ ಮಾಡಿದ ಸ್ಟಿಂಗ್ ಆಪರೇಷನ್ ನಿಂದಾಗಿ ಸಂಘಟನೆ ಮೇಲೆ ಅನುಮಾನ ಮೂಡಿದೆ ಎಂದರು. 2009 ಜನವರಿ ತಿಂಗಳು ಶ್ರೀರಾಮಸೇನೆಯ 40 ಕಾರ್ಯಕರ್ತರು ಮಂಗಳೂರಿನ ಅಮ್ನೇಶಿಯಾ ಪಬ್ ಗೆ ದಾಳಿಯಿಟ್ಟು ಹುಡುಗಿಯರ ಮೇಲೆ ದೌರ್ಜನ್ಯ ನಡೆಸಿದ್ದರು. ಟುಡ್ ಹೆಡ್ ಲೈನ್ಸ್ ವಾಹಿನಿಯೂ ಮುತಾಲಿಕ್ ಅವರು ಹಣ ಪಡೆದು ದಾಳಿ ಮತ್ತಪ ಪ್ರತಿಭಟನೆ ನಡೆಸುತ್ತಾರೆ ಎಂಬ ಸ್ಟಿಂಗ್ ಅಪರೇಷನ್ ನನ್ನು ಮಾಡಿತ್ತು. ಇದರಿಂದ ಆಕ್ರೋಶಗೊಂಡಿದ್ದ ಮುತಾಲಿಕ್, ವಾಹಿನಿ ವಿರುದ್ಧ ಬೆಳಗಾವಿಯಲ್ಲಿ ಮೊಕದ್ದಮೆ ದಾಖಲಿಸಿದ್ದರು.











Click it and Unblock the Notifications