ಮೈಸೂರು : ಡಿ.17 ರಿಂದ ಹೋಟೆಲ್ ಸಂಘದ ಸಮಾವೇಶ
ಮೈಸೂರು,
ನ. 17 : ಹೋಟೆಲ್ ಹಾಗೂ ಉಪಾಹಾರ ಮಂದಿರಗಳ ಸಂಘದ ರಾಜ್ಯಮಟ್ಟದ 16ನೇ ಸಮ್ಮೇಳನ ಡಿ. 17ರಿಂದ ಮೂರು ದಿನ ಮೈಸೂರಿನಲ್ಲಿ ನಡೆಯಲಿದೆ. ಕರ್ನಾಟಕ ಪ್ರದೇಶ ಹೋಟೆಲ್ ಹಾಗೂ ಉಪಾಹಾರ ಮಂದಿರಗಳ ಸಂಘದ ವತಿಯಿಂದ ಇಲ್ಲಿನ ರಾಜೇಂದ್ರ ಕಲಾಮಂದಿರದಲ್ಲಿ ಆಯೋಜಿಸಲಾಗಿರುವ ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತದ 5 ಸಾವಿರಕ್ಕೂ ಹೆಚ್ಚು ಹೋಟೆಲಿಗರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಎಂ ರಾಜೇಂದ್ರ ಮಂಗಳವಾರ ತಿಳಿಸಿದರು. id="toptextpromo">ರಾಜ್ಯಮಟ್ಟದ
ಸಮ್ಮೇಳನವನ್ನು ಮೂರು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಹಿಂದಿನ ಸಮ್ಮೇಳನಗಳು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ನಡೆದಿದ್ದವು. 22 ವರ್ಷದ ಹಿಂದೆ ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಹಿಂದಿನ ವರ್ಷವೇ 16ನೇ ಸಮ್ಮೇಳನ ನಡೆಯಬೇಕಾಗಿತ್ತು. ಆದರೆ ಪ್ರವಾಹದ ಕಾರಣಕ್ಕೆ ರದ್ದುಪಡಿಸಿ ಒಂದು ಕೋಟಿ ರೂ.ಗೂ ಹೆಚ್ಚಿನ ನೆರವನ್ನು ಸಂತ್ರಸ್ತರಿಗೆ ನೀಡಲಾಗಿತ್ತು ಎಂದರು. id='are-slot-1' class='oiad oi-axt oiadv'> id='top-searched-articles'>ಡಿ.18ರ
ಬೆಳಗ್ಗೆ ಸಿಎಂ ಯಡಿಯೂರಪ್ಪ ಸಮ್ಮೇಳನ ಉದ್ಘಾಟಿಸುವರು. ವಿಶ್ವೇಶತೀರ್ಥ ಸ್ವಾಮಿಜಿ ಸಾನ್ನಿಧ್ಯ ವಹಿಸುವರು. 19ರಂದು ಸಮಾರೋಪ ಸಮಾರಂಭ ನಡೆಯಲಿದ್ದು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.











Click it and Unblock the Notifications