ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜಿ ಈರುಳ್ಳಿಗಿಂತಲೂ ಮೂಸಂಬಿ ಬೆಲೆ ಬಲು ಅಗ್ಗ!

By Rajendra
|
Google Oneindia Kannada News

Onion prices bring tears to eyes
ಬೆಂಗಳೂರು, ನ.15: 'ಜಲ್' ಚಂಡಮಾರುತ ತಂದಅಕಾಲಿಕ ಮಳೆಗೆ ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ತಾಜಾ ತರಕಾರಿ ಬೆಲೆಗಳು ಗನಕ್ಕೆರಿವೆ. ಮುಖ್ಯವಾಗಿ ಈರುಳ್ಳಿ ಸೇರಿದಂತೆ ದಿನನಿತ್ಯ ಬಳಕೆ ಮಾಡುವ ತರಕಾರಿ ಬೆಲೆಗಳು ಗಗನ ಕುಸುಮವಾಗಿವೆ. ಈರುಳ್ಳಿ ಬೆಲೆಯಂತೂ ಕಣ್ಣೀರು ತರಿಸುವಂತಿದೆ.

ಒಂದು ಕೆ.ಜಿ ಈರುಳ್ಳಿ ಬೆಲೆ ರು.50ರ ಆಸುಪಾಸಿನಲ್ಲಿದೆ. ಹದಿನೈದು ದಿನಗಳ ಹಿಂದಷ್ಟೆ ಕೆ.ಜಿ ಈರುಳ್ಳಿ ಬೆಲೆ ರು.22ರಿಂದ ರು.25ರಷ್ಟಿತ್ತು. ಶನಿವಾರ ಹಾಪ್ ಕಾಮ್ಸ್ ಮಾರಾಟ ಮಳಿಗೆಗಳಲ್ಲಿ ಕೆ.ಜಿ ಈರುಳ್ಳಿ ಧಾರಣೆ ರು.46ರಷ್ಟಿತ್ತು. ತರಕಾರಿ ಅಂಗಡಿಗಳಲ್ಲಿ ಕೆ.ಜಿ ಈರುಳ್ಳಿ ಬೆಲೆ ರು.45ರಿಂದ ರು.50ರಷ್ಟಿದ್ದು ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ.

ಅಚ್ಚರಿಯ ಸಂಗತಿ ಎಂದರೆ ಕೆ.ಜಿ ಕ್ಯಾಪ್ಸಿಕಮ್ ಬೆಲೆ ರು.60 ಇದ್ದದ್ದು ರು.16ರಿಂದ ರು.20ಕ್ಕೆ ಇಳಿಕೆಯಾಗಿದೆ. ತಾಜಾ ಹುರುಳಿಕಾಯಿ ಬೆಲೆ ಕೆ.ಜಿಗೆ ರು.40ರಷ್ಟು ಇದ್ದದ್ದು ರು.18ಕ್ಕೆ ಇಳಿಕೆಯಾಗಿದೆ. ಆದರೆ ಬೆಂಡೆಕಾಯಿ ಮತ್ತು ಕ್ಯಾರೆಟ್ (ಊಟಿ) ಬೆಲೆ ಕೈ ಸುಡುವಂತ್ತಿದ್ದು, ಕ್ರಮವಾಗಿ ರು.32 ಹಾಗೂ ರು.44ರಷ್ಟಿದೆ.

"ಬೇರೆ ಮಾರುಕಟ್ಟೆಗೆ ಹೋಲಿಸಿದರೆ ರಸೆಲ್ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿ ಬೆಲೆಗಳು ಕೈಗೆಟುಕುವ ಬೆಲೆಯಲ್ಲಿವೆ. ರಸೆಲ್ ಮಾರುಕಟ್ಟೆಯಲ್ಲಿ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದಿರುವುದೇ ಇದಕ್ಕೆ ಕಾರಣ" ಎನ್ನುತ್ತಾರೆ ಹಣ್ಣು ಮತ್ತು ವಿದೇಶಿ ಹೂ ಮಾರಾಟಗಾರರ ಸಂಘದ ಕಾರ್ಯದರ್ಶಿ ಚೌದರಿ.

"ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಿದ್ದ ಅಕಾಲಿಕ ಮಳೆ ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ. ಈಗ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿಯನ್ನು ಹೆಚ್ಚುದಿನ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈರುಳ್ಳಿ ಬೆಲೆ ಗಗನಕ್ಕೇರಿದೆ" ಎನ್ನುತ್ತಾರೆ ತರಕಾರಿ ಚಿಲ್ಲರೆ ಮಾರಾಟಗಾರರ ಸಂಘದ ಹಿರಿಯ ಕಾರ್ಯನಿರ್ವಾಹಕ ಜಿ ಎಂ ವೆಂಕಟೇಶ್.

ಕೈಗೆಟುಕುವ ಬೆಲೆಯಲ್ಲಿ ತಾಜಾ ಹಣ್ಣುಹಂಪಲು: ಹಬ್ಬ ಹರಿದಿನಗಳ ಬಳಿಕ ತಾಜಾ ಹಣ್ಣುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಹಬ್ಬದ ಸಂದರ್ಭದಲ್ಲಿ ಕೆ.ಜಿ ಆಫಲ್ (ಕಾಶ್ಮಿರ್) ಬೆಲೆ ರು.90ರಿಂದ ರು.100 ಇದ್ದದ್ದು ರು. 60 ರಿಂದ ರು.70ಕ್ಕೆ ಇಳಿಕೆಯಾಗಿದೆ. ಮೂಸಂಬಿ ಬೆಲೆಯಲ್ಲೂ ಇಳಿಕೆಯಾಗಿದ್ದು ರು.40 ಇದ್ದದ್ದು ರು.35ಕ್ಕೆ ಇಳಿಕೆಯಾಗಿದೆ. ಏಲಕ್ಕಿ ಬಾಳೆ ಹಾಗೂ ಸಪೋಟ ಹಣ್ಣುಗಳ ಬೆಲೆಯು ಕೈಗೆಟುಕುತ್ತಿದ್ದು ಕೆ.ಜಿಗೆ ರು. 35ರಿಂದ ರು.40ರಷ್ಟಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X