ಇನ್ನೆಷ್ಟು ದಿನ ಬದುಕಿರುತ್ತೇನೋ ನಾ ಅರಿಯೆ: ಎಚ್ಡಿಕೆ
ಚನ್ನಪಟ್ಟಣ,
ನ. 15 : ಹೃದಯದ ಬೇನೆ ನನ್ನನ್ನು ಕಾಡುತ್ತಿದೆ, ಆದರೂ ನಿತ್ಯ 20 ಗಂಟೆ ಕಾಲ ರಾಜ್ಯದ ಜನರ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದೇನೆ. ನಾನು ಇನ್ನು ಎಷ್ಟು ದಿನ ಬದುಕಿರುತ್ತೇನೆ ಎಂದು ನನಗೆ ತಿಳಿಯದು. ಇದ್ದಷ್ಟು ದಿನ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸದಾ ಕಟಿ ಬದ್ಧನಾಗಿರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗದ್ಗತಿತರಾಗಿ ನುಡಿದಿದ್ದಾರೆ. id="toptextpromo">ಪಕ್ಷದ
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೀಳುಮಟ್ಟದ ರಾಜಕಾರಣ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಹಕಾರ ನೀಡಬೇಕೆಂದು ಕೆಲ ಮಠಾಧೀಶರು ಹೇಳುತ್ತಿದ್ದಾರೆ. ಇಂಥ ಹೇಳಿಕೆಯಿಂದ ನನ್ನ ಮನಸಿಗೆ ತೀವ್ರ ನೋವಾಗಿದೆ ಎಂದು ನೊಂದು ನುಡಿದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಂಟು
ಸಚಿವರ ರಾಜೀನಾಮೆ ಪಡೆಯುವ ಹೀನ ಕೆಲಸ ಮಾಡಿದ ಸಂದರ್ಭದಲ್ಲಿ ಮಠಾಧೀಶರು ದನಿ ಎತ್ತಲಿಲ್ಲ. ನಾನು ಯಾವುದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲವೆಂಬುದು ವೀರಶೈವ ಸಮಾಜಕ್ಕೆ ಗೊತ್ತಿದೆ. ರಾಜ್ಯದ ಬಡ ಜನರ ಕಣ್ಣೀರು ಒರೆಸುವ ಸಿಎಂ ಬೇಕೋ? ಅಥವಾ ಜಾತಿವಾದಿ ಸಿಎಂ ಬೇಕೋ ಎಂದು ಮಠಾಧೀಶರು ತೀರ್ಮಾನಿಸಲಿ ಎಂದು ಕುಮಾರಸ್ವಾಮಿ ಮರ್ಮಾಮಿಕವಾಗಿ ನುಡಿದ್ದಾರೆ.











Click it and Unblock the Notifications