ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಬಂಧನದಿಂದ ನಾಯಕಿ ಸೂಕಿ ಬಿಡುಗಡೆ

By Mahesh
|
Google Oneindia Kannada News

India breaks silence on Myanmar, welcomes Suu Kyi
ಯಾಂಗೊನ್, ನ.13: ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸಾನ್ ಸೂ ಕಿಯನ್ನು ಅಲ್ಲಿನ ಸೇನಾಧಿಕಾರ ಶನಿವಾರ ಬಿಡುಗಡೆ ಮಾಡಿದೆ. ಗೃಹ ಬಂಧನದಲ್ಲಿದ್ದ ಸೂಕಿಯ ಬಿಡುಗಡೆಯಾಗುತ್ತಿದ್ದಂತೆಯೇ, ಆಕೆಯ ಮುಖ ದರ್ಶನ ಪಡೆಯಲು ಕಾತರರಾಗಿ ಮನೆಯ ಬಳಿ ಸೇರಿದ್ದ ಸಾವಿರಾರು ಮಂದಿ ಹರ್ಷೋದ್ಗಾರ ಮಾಡಿದರು. ಸೂಕಿ ಅವರ ಬಿಡುಗಡೆಯನ್ನು ಭಾರತ ಸ್ವಾಗತಿಸುತ್ತದೆ. ಮ್ಯಾನ್ಮಾರ್ ನೊಂದಿಗಿನ ಸೌಹಾರ್ದ ಸಂಬಂಧ ವೃದ್ಧಿಗೆ ಇದು ನಾಂದಿಯಾಗಲಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಹೇಳಿದರು.

ಸಂಜೆ 5:30ರ ವೇಳೆ ಪೊಲೀಸ್ ವಾಹನಗಳು ಸೂಕಿಯ ಮನೆಯ ಬಳಿಗೆ ಆಗಮಿಸಿದವು ಹಾಗೂ ಆಕೆಗೆ ಬಿಡುಗಡೆ ಪತ್ರಗಳನ್ನು ನೀಡಲು ಅಧಿಕಾರಿಗಳನ್ನು ಒಳಗೆ ಕಳುಹಿಸಲಾಯಿತು. ಮ್ಯಾನ್ಮಾರ್‌ನ ಯಾಂಗೊನ್‌ನಲ್ಲಿ ಶನಿವಾರ ಗಹ ಬಂಧನದಿಂದ ಬಿಡುಗಡೆಯಾದ ಪ್ರಜಾಪ್ರಭುತ್ವ ಪರ ನಾಯಕಿ ಅಂಗ್ ಸಾನ್ ಸೂಕಿ ತನ್ನ ನಿವಾಸದ ಆವರಣದಿಂದ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಿರುವುದು. ಸುಮಾರು 15 ವರ್ಷಗಳನ್ನು ಬಂಧನದಲ್ಲೇ ಕಳೆದ ಸೂ ಕಿಯನ್ನು ಮ್ಯಾನ್ಮಾರ್‌ನ ಸೇನಾಡಳಿತ ಶನಿವಾರ ಬಿಡುಗಡೆಗೊಳಿಸಿದೆ.

English summary
India broke its silence on Myanmar"s democracy as SM Krishna on Nov 13 welcomed its decision to release Suu Kyi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X