ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣ: ಇಂದು ವಿಚಾರಣೆ
ಬೆಂಗಳೂರು,
ನ.11: ಐವರು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಅನರ್ಹತೆಯನ್ನು ಪಶ್ನಿಸಿ ಐವರು ಪಕ್ಷೇತರ ಶಾಸಕರು ರಿಟ್ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಸೇರಿದಂತೆ 7 ಮಂದಿಗೆ ಪೂರ್ಣ ಪೀಠ ನೋಟಿಸ್ ಜಾರಿ ಮಾಡಿತ್ತು. ಆದರೆ, ಪಕ್ಷೇತರನ್ನು ಅನರ್ಹಗೊಳಿಸಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಸ್ಪೀಕರ್ ಬೋಪಯ್ಯ ಅವರು ರಿಜಿಸ್ಟ್ರಾರ್ ಜನರಲ್ ಅವರಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಪತ್ರ ಇಂದು ನ್ಯಾಯಪೀಠಕ್ಕೆ ಸಲ್ಲಿಕೆಯಾಗಲಿದೆ. id="toptextpromo">ಹಿರಿಯೂರು
ಶಾಸಕರ ವಿರುದ್ಧ ದೂರು ನೀಡಿದ್ದ ಮತದಾರ ಹೈಕೋರ್ಟ್ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಹಿರಿಯೂರು ಕ್ಷೇತ್ರದ ಪಕ್ಷೇತರ ಶಾಸಕ ಡಿ. ಸುಧಾಕರ್ ವಿರುದ್ಧ ಸ್ಪೀಕರ್‌ಗೆ ದೂರು ನೀಡಿದ್ದ ಮತದಾರ ಪ್ರಕರಣದ ನಾಲ್ಕನೆ ಪ್ರತಿವಾದಿ ಎಸ್.ಎಂ. ಬಸವರಾಜ್ ಎಂಬವರು ಹೈಕೋರ್ಟ್ ನೋಟಿಸ್‌ಗೆ ಗುರುವಾರ ಉತ್ತರ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಕರಣಕ್ಕೆ
ಸಂಬಂಧಿಸಿದಂತೆ ನ.2ಕ್ಕೆ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ಈ ಕುರಿತು ಹೇಳಿಕೆ ಸಲ್ಲಿಸುವಂತೆ ಸ್ಪೀಕರ್, ಮುಖ್ಯಮಂತ್ರಿ ಹಾಗೂ ಐವರು ಮತದಾರರಿಗೆ ನೋಟಿಸ್ ಜಾರಿ ಮಾಡಿತ್ತು. ನ.8ಕ್ಕೆ ನಡೆದ ವಿಚಾರಣೆಯ ಸಂದರ್ಭದಲ್ಲಿ ಕನಕಗಿರಿ ಹಾಗೂ ಹೊಸದುರ್ಗ ಕ್ಷೇತ್ರಗಳ ಮತದಾರರಿಬ್ಬರು ಸರಕಾರಕ್ಕೆ ವಿರುದ್ದವಾದ ಹೇಳಿಕೆ ಸಲ್ಲಿಸಿದ್ದರು. ಇದಕ್ಕೆ ಪ್ರತಿ ಹೇಳಿಕೆ ಸಲ್ಲಿಸಲು ಸರಕಾರ, ಸ್ಪೀಕರ್, ಸಿಎಂ ಹಾಗೂ ಮೂವರು ಮತದಾರರು ಕಾಲಾವಕಾಶ ಕೇಳಿದ್ದುದರಿಂದ ನ್ಯಾಯಪೀಠ ವಿಚಾರಣೆಯನ್ನು ನ.12ಕ್ಕೆ ಮುಂದೂಡಿತ್ತು.ಮತದಾರನಿಂದ
ಪ್ರಮಾಣಪತ್ರ:
"ಯಾರದೇ
ಒತ್ತಾಯಕ್ಕೆ
ಮಣಿದ
ನಾನು
ದೂರು
ನೀಡಿಲ್ಲ.
ನಮ್ಮ
ಕ್ಷೇತ್ರದ
ಶಾಸಕ
ಡಿ.
ಸುಧಾಕರ್
ಬಿಜೆಪಿ
ಅಭ್ಯರ್ಥಿಯಾಗಿ
ಗೆಲ್ಲದಿದ್ದರೂ,
ಬಿಜೆಪಿ
ಶಾಸಕಾಂಗ
ಸಭೆ
ಸೇರಿದಂತೆ
ಇತರ
ಸಭೆಗಳಲ್ಲಿ
ಪಾಲ್ಗೊಂಡಿದ್ದಾರೆ.
ಪಕ್ಷ
ಮತ್ತು
ಸರಕಾರದ
ವಿರುದ್ಧ
ಅವರ
ನಡವಳಿಕೆಯಿಂದ
ಕ್ಷೇತ್ರದ
ಜನತೆಗೆ
ಅನ್ಯಾಯವಾಗಿದೆ.
ಆದುದರಿಂದ
ಅವರನ್ನು
ಅನರ್ಹಗೊಳಿಸಬೇಕು
ಎಂದು
ನಾನು
ಸ್ಪೀಕರ್‌ಗೆ
ದೂರು
ನೀಡಿದ್ದೇನೆ.
ಈ
ಪ್ರಕರಣದಲ್ಲಿ
ಮುಖ್ಯಮಂತ್ರಿಯನ್ನು
ಪ್ರತಿವಾದಿಯನ್ನಾಗಿ
ಮಾಡುವ
ಆವಶ್ಯಕತೆ
ಇರಲಿಲ್ಲ"
ಎಂದು
ಬಸವರಾಜ್
ತನ್ನ
ಉತ್ತರದಲ್ಲಿ
ದೂರನ್ನು
ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications