ಕೇಂದ್ರಕ್ಕೆ ಬೆಂಬಲ: ಎಚ್ಡಿಕೆ, ಜಯಲಲಿತಾ ಘೋಷಣೆ
ನವದೆಹಲಿ/ಚೆನ್ನೈ,
ನ.12: 2ಜಿ ತರಂಗಾಂತರ ಹರಾಜಿನ ಅವ್ಯವಹಾರದ ಆರೋಪ ಹೊತ್ತಿರುವ ದೂರಸಂಪರ್ಕ ಸಚಿವ ಎ.ರಾಜಾ ಅವರನ್ನು ಸಂಪುಟದಿಂದ ಕೈಬಿಡುವುದರಿಂದ ಡಿಎಂಕೆಯು ಕೇಂದ್ರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿ ಉಂಟಾದರೆ, ಯುಪಿಎ ಸರ್ಕಾರಕ್ಕೆ ಷರತ್ತುಬದ್ಧ ಬೆಂಬಲ ನೀಡಲು ಸಿದ್ಧ ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಗುರುವಾರ ಘೋಷಿಸಿದ್ದಾರೆ. ಇದರ ಜೊತೆಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ತಮ್ಮ ಪಕ್ಷ ಕೂಡಾ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧವಿದೆ ಎಂದಿದ್ದಾರೆ. id="toptextpromo">ರಾಜಾ
ವಿರುದ್ಧ ಕ್ರಮ ಕೈಗೊಂಡರೆ ಡಿಎಂಕೆ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳಬಹುದು, ಆಗ ಮಧ್ಯಂತರ ಚುನಾವಣೆ ಎದುರಿಸಬೇಕಾಗುತ್ತದೆ ಎಂಬ ಭೀತಿಯಿಂದ ರಾಜಾ ಅವರನ್ನು ಸಂಪುಟದಿಂದ ಕೈಬಿಡಲು ಪ್ರಧಾನಿ ಮುಂದಾದರೆ, ಎಐಎಡಿಎಂಕೆ ಬೆಂಬಲ ನೀಡಲು ಸಿದ್ಧವಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ನಡುವೆ ದೇವೇಗೌಡ ಸೇರಿದಂತೆ ಮೂರು ಸಂಸದರನ್ನುಳ್ಳ ಜೆಡಿಎಸ್ ಕೂಡಾ ಯುಪಿಎಗೆ ಬೆಂಬಲ ನೀಡಲು ಸಿದ್ಧವಾಗಿ ನಿಂತಿದೆ. 2008ರಲ್ಲಿ ಯುಪಿಎ ಮಂಡಿಸಿದ ಅಣ್ವಸ್ತ್ರ ಕಾಯಿದೆ ವಿರುದ್ಧ ಮತ ಹಾಕಿದ್ದ ಜೆಡಿಎಸ್ ಈಗ ಬದಲಾದ ರಾಜಕೀಯ ಚಿತ್ರಣಕ್ಕೆ ಹೊಂದಿಕೊಂಡು ತನ್ನ ನಿಲುವು ಬದಲಿಸಿಕೊಂಡಿದೆ. ಕೇಂದ್ರದಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಕುಮಾರಸ್ವಾಮಿ ಹಲವು ಬಾರಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.











Click it and Unblock the Notifications