ಬಿಜೆಪಿ ಸರ್ಕಾರದ ಲಂಚಾವತಾರಕ್ಕೆ ಬೆಚ್ಚಿದ ಶಾಸಕ

BJP Govt corruption
ಮಂಡ್ಯ, ನ.10: ಬಿಜೆಪಿ ಸರ್ಕಾರದಲ್ಲಿ ಅಡಿಯಿಂದ ಮುಡಿಯವರೆಗೂ ಲಂಚಕೋರರೇ ತುಂಬಿದ್ದಾರೆ. ಪ್ರತಿಯೊಬ್ಬ ಸಚಿವರಿಗೂ ಲಂಚ ವಸೂಲಿ ಏಜೆಂಟ್ ಗಳಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಅನುದಾನ ಬಿಡುಗಡೆಗಾಗಿ ಲಂಚ ನೀಡಿದ್ದೇನೆ ಎಂದು ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಸುರೇಶ್ ಗೌಡ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ, ಲಂಚ ಪಡೆದ ಸಚಿವರ ಹಾಗೂ ಅವರ ಏಜೆಂಟ್ ಹೆಸರು ಹೇಳಲು ನಿರಾಕರಿಸಿದರು. ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆಗೆ ಲಕ್ಷಾಂತರ ರೂ. ಲಂಚ ನೀಡಬೇಕಾದ ದುಃಸ್ಥಿತಿ ಬಂದಿದೆ ಎಂದು ವಿಷಾದಿಸಿದರು.

ಲಂಚ ನೀಡಿರುವ ಬಗ್ಗೆ ಲೋಕಾಯುಕ್ತರು ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಇಂತಹ ನೀಚ ಸರಕಾರವನ್ನು ಎಂದೂ ನೋಡಿರಲಿಲ್ಲ. ಲಂಚ ನೀಡಿದರೆ ವಾತ್ರ ಅನುದಾನ, ಇಲ್ಲದಿದ್ದರೆ ಆ ಶಾಸಕನ ಕ್ಷೇತ್ರಕ್ಕೆ ಅನುದಾನ ದೊರೆಯದು ಎಂದು ಅವರು ಆಪಾದಿಸಿದರು.

ಭಾಗ್ಯಲಕ್ಷ್ಮಿ ತಾಯಂದರಿಗೆ ಸೀರೆ ವಿತರಣೆ ಕಾರ್ಯಕ್ರಮಕ್ಕೆ ತನಗೆ ಆಹ್ವಾನ ನೀಡಿರಲಿಲ್ಲ. ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸರ ಕಾವಲಿನಲ್ಲಿ ಸಮಾವೇಶ ನಡೆಸಿ ಗೂಂಡಾ ಸಂಸ್ಕೃತಿ ಮೆರೆಯಲಾಗಿದೆ ಎಂದು ಟೀಕಿಸಿದರು. ರಾಜ್ಯದ ಬಹುತೇಕ ಯೋಜನೆಗ ಳಿಗೆ ಕೇಂದ್ರ ಸರಕಾರದ ಅನುದಾನವೇ ಆಧಾರ. ಆದರೂ, ಕೇಂದ್ರದ ವಿರುದ್ಧ ಆರೋಪ ವಾಡಲಾಗುತ್ತಿದೆ ಎಂದು ಸುರೇಶ್‌ಗೌಡ ಲೇವಡಿ ವಾಡಿದರು.

ಕಾಂಗ್ರೆಸ್ ಸಭೆ: ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯ ಹಿನ್ನೆಲೆಯಲ್ಲಿ ನ.15ರಂದು ಮಧ್ಯಾಹ್ನ 2 ಗಂಟೆಗೆ ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಕೆ. ಬಿ. ಚಂದ್ರಶೇಖರ್ ತಿಳಿಸಿದರು.

ಮಾಜಿ ಸಂಸದ ಅಂಬರೀಶ್ ಸೇರಿದಂತೆ ಇತರ ಮುಖಂಡರು ಸಭೆಗೆ ಆಗಮಿಸಲಿದ್ದು, ಜಿಲ್ಲೆಯ ಎಲ್ಲಾ ವಿಭಾಗದ ಕಾಂಗ್ರೆಸ್ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+