ದೇಗುಲ ಪ್ರವೇಶ : ಜಯಮಾಲಾ ವಿರುದ್ಧ ಚಾರ್ಜ್ ಶೀಟ್?

ಖ್ಯಾತ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್ ಅವರನ್ನು ಮೊದಲ ಆರೋಪಿಯನ್ನಾಗಿ, ಸಹಾಯಕ ರಘುಪತಿ, ದೇವಸ್ಥಾನದ ಸಿಇಒ ರಾಜಶೇಖರ್ ಅವರನ್ನು ಎರಡು ಮತ್ತು ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಮಾಲಾ 1987ರಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ್ದನ್ನು ಒಪ್ಪಿಕೊಂಡಿದ್ದರು. ಈ ಪ್ರಕರಣ 2006ರಲ್ಲಿ ಬೆಳಕಿಗೆ ಬಂದಿತ್ತು.
ದೇವಸ್ಥಾನದ ಖ್ಯಾತ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್ ಅವರು ಅಷ್ಠಮಂಗಲ ಪ್ರಶ್ನೋತ್ತರ ವೇಳೆ ಜಯಮಾಲಾ ದೇವಸ್ಥಾನ ಪ್ರವೇಶ ಮಾಡಿದ್ದನ್ನು ಪತ್ತೆ ಹಚ್ಚಿದ್ದರು. ಅಲ್ಲದೇ ಜಯಮಾಲಾ ಕೂಡಾ 1987ರಲ್ಲಿ ದೇವಸ್ಥಾನ ಪ್ರವೇಶಿಸಿದ್ದನ್ನು ಒಪ್ಪಿಕೊಂಡಿದ್ದರು. ಜೊತೆಗೆ ಫ್ಯಾಕ್ಸ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಕ್ಕೆ ಅರ್ಚಕರ ಬಳಿ ಕ್ಷಮೆ ಕೋರಿದ್ದರು.
ಪ್ರಕರಣ ಹೊರಬೀಳುತ್ತಿದ್ದಂತೆಯೇ ಭಕ್ತರ ವಲಯದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿಯ ನಿಯಮದ ಪ್ರಕಾರ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ.











Click it and Unblock the Notifications