ರಿಯಲ್ ಹೀರೋ ಗಾಂಧಿಗೆ ನಮಿಸಿದ ಒಬಾಮಾ

ರಾಷ್ಟ್ರಪಿತ ಗಾಂಧೀಜಿ 'ರಿಯಲ್ ಹೀರೋ' ಎಂದು ಹಲವು ಬಾರಿ ಬಣ್ಣಿಸಿರುವ ಒಬಾಮಾ, ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ. ಇಡೀ ಜಗತ್ತಿಗೆ ಹೀರೋ ಎಂದು ಶನಿವಾರ ಗಾಂಧೀ ಮ್ಯೂಸಿಯಂನಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ಬರೆದು ಹಸ್ತಾಕ್ಷರ ಹಾಕಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಅಮೆರಿಕ ಯಾಕೆ ಘೋಷಿಸುವುದಿಲ್ಲ? ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದ ಒಬಾಮ, ಇದೊಂದು ಉತ್ತಮ ಪ್ರಶ್ನೆಯಾಗಿದ್ದು, ಅದನ್ನು ತಾನು ನಿರೀಕ್ಷಿಸಿದ್ದೆ ಎಂದರು.
ಭಾರತ ಹಾಗೂ ಪಾಕಿಸ್ತಾನಗಳು ಅಭಿವೃದ್ಧಿ ಹೊಂದಿ ನೆರೆಹೊರೆಯಲ್ಲಿ ಬಾಳಬಲ್ಲವು. ಆದರೆ ಇದು ನಾಳೆಗೇ ಸಂಭವಿಸದು. ಅದಕ್ಕೆ ಖಚಿತ ಗುರಿ ಇರಬೇಕು. ಅಮೆರಿಕವು ಭಾಗಿದಾರನಾಗಬಹುದೇ ಹೊರತು ಈ ಸಂಧಾನ ಪ್ರಕ್ರಿಯೆಯನ್ನು ಹೇರುವಂತಿಲ್ಲ. ಭಾರತ-ಪಾಕಿಸ್ತಾನಗಳು ಸ್ವತಃ ತಿಳುವಳಿಕೆ ಹೊಂದಿವೆ ಎಂದರು. ಭಾನುವಾರ ಮುಂಬೈನ ಕ್ಸೇವಿಯರ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಜಗತ್ತಿಗೇ ಬೇಕಾಗಿರುವ ರಾಷ್ಟ್ರ ಎನ್ನುವ ಮೂಲಕ ಒಬಾಮಾ ಪರೋಕ್ಷವಾಗಿ ಪಾಕ್ ಪರ ನಿಲುವು ತಳೆದರು.












Click it and Unblock the Notifications