ಕೇರಳ ಬಸ್‌ಗಳ ಮೇಲೆ ದೇವರ ಚಿತ್ರ ನಿಷೇಧ
ತಿರುವನಂತಪುರ,
ಆ. 27 : ಯಾತ್ರಾ ಸ್ಥಳಗಳಿಗೆ ಸಂಚರಿಸುವ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ಮೇಲೆ ದೇವರ ಚಿತ್ರ ಅಥವಾ ಧಾರ್ಮಿಕ ಸಂಕೇತಗಳ ಪ್ರದರ್ಶನವನ್ನು ನಿಷೇಧಿಸಿ ಕೇರಳ ಸರಕಾರ ಆದೇಶ ಹೊರಡಿಸಿದೆ. ಶಬರಿಮಲೈ ಯಾತ್ರೆಯನ್ನು ಗುರಿಯಾಗಿರಿಸಿಕೊಂಡು ಕೇರಳ ಸರಕಾರ ಈ ಆದೇಶ ಹೊರಡಿಸಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. id="toptextpromo">ರಾಜ್ಯಾದ್ಯಂತ
ಎಲ್ಲಾ ರಸ್ತೆ ಸಾರಿಗೆ ಘಟಕಗಳನ್ನು ತಲುಪಿರುವ ಈ ಆದೇಶದಲ್ಲಿ ಯಾತ್ರಾ ಸ್ಥಳಗಳಿಗೆ ತೆರಳುವ ಬಸ್ ಗಳ ಮೇಲೆ ಧಾರ್ಮಿಕ ವಚನಗಳು, ಚಿಹ್ನೆ ಮತ್ತು ಧ್ವಜಗಳನ್ನು ಪ್ರದರ್ಶಿಸುವ ಪದ್ಧತಿಯನ್ನು ಈ ಕೂಡಲೇ ನಿಲ್ಲಿಸುವಂತೆ ಘಟಕಗಳ ಮುಖ್ಯಸ್ಥರಿಗೆ ಆದೇಶ ನೀಡಿದೆ. ಶಬರಿಮಲೈ ಸೇರಿದಂತೆ ಪ್ರಸಿದ್ಧ ಯಾತ್ರಾ ಕೇಂದ್ರಗಳಿಗೆ ಸಂಚರಿಸುವ ಬಸ್ ಗಳ ಮೇಲೆ ಸ್ವಾಮಿಯೇ ಶರಣಂ ಅಯ್ಯಪ್ಪ ಮುಂತಾದ ಶಬ್ದಗಳನ್ನು ಪ್ರದರ್ಶಿಸಬಾರದೆಂದು ಸುತ್ತೋಲೆಯಲ್ಲಿ ನಿರ್ಲಿಪ್ತ ನಿರ್ದೇಶನ ಸರಕಾರ ನೀಡಿದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಮುಂದಿನ
ತಿಂಗಳು ಯಾತ್ರಾ ಋತು ಆರಂಭಗೊಳ್ಳಲಿದ್ದು ಶಬರಿಮಲೈ ಕ್ಷೇತ್ರದ ವಿರುದ್ಧವೇ ಈ ಆದೇಶ ಹೊರಡಿಸಿದೆಂದು ವಿಶ್ವ ಹಿಂದೂ ಪರಿಷತ್ ಆಪಾದಿಸಿದೆ. ಈ ಕ್ಷೇತ್ರಕ್ಕೆ ತೆರಳುವಾಗ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಮತ್ತು ಸ್ಪೀಕರ್ ಗಳನ್ನು ಅಳವಡಿಸುವುದು ಬಹಳ ಹಿಂದಿನಿಂದ ಬಂದ ಪದ್ಧತಿ. ಇದು ಬೇರೆ ಬೇರೆ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರುಗಳಿಗೆ ಶಬರಿಮಲೈ ಹೋಗುವ ಬಸ್ ಗಳನ್ನು ಗುರುತಿಸಲು ಸಹಾಯವಾಗುತ್ತದೆ. ಕೇರಳ ಸರಕಾರ ಈ ಸುತ್ತೋಲೆ ಹಿಂದೆ ತೆಗೆದುಕೊಳ್ಳುವ ತನಕ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ವಿಎಚ್ ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.











Click it and Unblock the Notifications