ಅಯೋಧ್ಯೆಯ ಒಂದಿಂಚು ನೆಲವನ್ನು ಬಿಟ್ಟುಕೊಡಲ್ಲ
ಅಯೋಧ್ಯೆ,
ಅ. 21 : ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ ಬಾಬ್ರಿ ಮಸೀದಿಯ ಮೂಲ ಸ್ಥಳವನ್ನು ಮೂರು ಭಾಗಗಳಾಗಿ ವಿಭಜಿಸಬೇಕೆಂಬ ಅಲಹಾಬಾದ್ ಹೈಕೋರ್ಟ್ ನ ತೀರ್ಪನ್ನು ಸುಪ್ರೀಕೋರ್ಟ್ ನಲ್ಲಿ ಪ್ರಶ್ನಿಸಲು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಅನೇಕ ಧಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ವಿವಾದಿತ ಸ್ಥಳದ ಒಂದಿಂಚು ನೆಲವನ್ನು ಬಿಟ್ಟಕೊಡದಿರಲು ಈ ಸಂಘಟನೆಗಳು ತೀರ್ಮಾನಿಸಿವೆ. id="toptextpromo">ಸಂತ
ಉಚ್ಚಾಧಿಕಾರ್ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಕರಸೇವಕ್ ಪುರದಲ್ಲಿ ಬುಧವಾರ ದಿನಪೂರ್ತಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಕೊಳ್ಳಲಾಗಿದೆ. ಪ್ರಕರಣದ ಕಕ್ಷಿದಾರರಲ್ಲಿ ಒಬ್ಬರಾದ ಲಲ್ಲಾ ವಿರಾಜಮಾನ್ ಸಂಘಟನೆ ವಕೀಲ ತ್ರೀಲೋಕನಾಥ್ ಪಾಂಡೆ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಾಸುದೇವಾನಂದ ಸರಸ್ವತಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿವಾದಿತ
ನಿವೇಶನವನ್ನು ವಿಭಜಿಸದೆ ಇರುವುದೇ ಸುಧೀರ್ಘ ಕಾಲದ ಈ ಬಿಕ್ಕಟ್ಟು ಬಗೆಹರಿಸಲು ಇರುವ ದಾರಿ. ರಾಮ ಲಲ್ಲಾನೇ ಈ ವಿವಾದಿತ ನೆಲದ ಮಾಲೀಕ ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ವಿಎಚ್ ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಹೇಳಿದ್ದಾರೆ.











Click it and Unblock the Notifications