ಬಾಗೇಪಲ್ಲಿ ಸುಂಕಲಮ್ಮನಿಗೆ ಯಾರು ದಿಕ್ಕು?

Kolar
ಬಾಗೇಪಲ್ಲಿ, ಅ.19: ಇಲ್ಲಿನ ಪ್ರಸಿದ್ಧ ಸುಂಕಲಮ್ಮ ದೇವಾಲಯವನ್ನು ಕೆಡವಲು ಮುಂದಾಗಿದ್ದ ಜಿಲ್ಲಾಡಳಿತ ಭಕ್ತರ ಆಕ್ರೋಶಕ್ಕೆ ಸಿಕ್ಕಿದೆ.'ರಸ್ತೆ ಅಗಲೀಕರಣದ ನೆಪದಲ್ಲಿ ದೇಗುಲ ಕೆಡವಲು ಬಂದಿರುವ ನೀವು ಇಲ್ಲಿಂದ ಒಂದು ಕಲ್ಲು ಪಕ್ಕಕ್ಕೆ ಸರಿಸಿದರೂ ಸುಮ್ಮನಿರುವುದಿಲ್ಲ' ಎಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಎಗರಾಡಿದ ಭಕ್ತ ಮಹಾಶಯರು ಪ್ರತಿಭಟನೆ ಇಂದು ಶಾಂತಗೊಂಡಿದ್ದು ಪರಿಸ್ಥಿತಿ ಕೊಂಚ ತಿಳಿಗೊಂಡಿದೆ.

ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 7 ರ ಅಗಲೀಕರಣಕ್ಕೆ ತೊಡಕಾಗಿದ್ದ ಈ ದೇವಸ್ಥಾನವನ್ನು ಸೋಮವಾರ ಅಧಿಕಾರಿಗಳು ಕೆಡವಲು ಮುಂದಾಗಿದ್ದರು. ಆದರೆ ಸ್ಥಳೀಯರ ಪ್ರತಿಭಟನೆ ಹೆದರದೆ ಅಧಿಕಾರಿಗಳು ಜೆಸಿಬಿ ಯಂತ್ರಗಳೊಡನೆ ಮುನ್ನುಗಿದಾಗ ವೀರಾವೇಶದಿಂದ ಹಾರಾಟ ಮಾಡಿದ ಭಕ್ತಾದಿಗಳು ಸ್ಥಳದಲ್ಲೇ ನಿಲ್ಲಿಸಿದ್ದ ಖಾಸಗಿ ಜೀಪೊಂದಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನವನ್ನು ಕೆಡವುತ್ತಿದ್ದ ಜೆಸಿಬಿ ಯಂತ್ರಕ್ಕೆ ಕಲ್ಲುಗಳನ್ನೆಸೆದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ಪರಿಸ್ಥಿತಿ ಕೈಮೀರತೊಡಗಿದಾಗ ದೇಗುಲ ತೆರವು ಕಾರ್ಯಕ್ಕೆ ಮುಂದಾಗಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಎನ್.ನಾಯಕ್ ಮತ್ತು ತಹಶೀಲ್ದಾರ್ ಹನುಮಂತರಾಯಪ್ಪ ಅವರು ಸ್ಥಳದಿಂದ ಪೊಲೀಸರಿಗೆ ನಿರ್ದೇಶನ ನೀಡಿ ಜಾಗ ಖಾಲಿ ಮಾಡಿದರು.

ಎಸ್ಪಿ ಡಿಟಿ ಪವಾರ್ ಹಾಗು ಡಿವೈಎಸ್ಪಿ ದುರ್ಗಪ್ಪ ಅವರ ನೇತೃತ್ವದಲ್ಲಿ ಕೋರ್ಟ್ ಆಜ್ಞೆಯ ಮೇರೆಗೆ ದೇವಸ್ಥಾನವನ್ನು ಕೆಡವುವ ಯೋಜನೆಯನ್ನು ರೂಪಿಸಲಾಗಿದೆ. ಮೂಲ ವಿಗ್ರಹಕ್ಕೆ ಯಾವುದೇ ಧಕ್ಕೆ ಬಾರದಂತೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಸಮಾಜಾಯಿಸಿ ನೀಡಿದ್ದಾರೆ. ಆದರೆ, ಗಲಭೆ, ಗೊಂದಲಗಳ ನಡುವೆ ದೇಗುಲಗಳ ಗೊಡೆಗಳನ್ನು ಜೆಸಿಬಿ ಯಂತ್ರ ಉರುಳಿಸಿದ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+