ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈನಲ್ ನಲ್ಲಿ ನಮ್ಗೆ ಜಯ ನೋಡ್ತಾಯಿರಿ: ಸಿದ್ದು

By Mahesh
|
Google Oneindia Kannada News

Siddaramaiah
ಬೆಂಗಳೂರು, ಅ.14: ಅಪರೇಷನ್ ಕಮಲದಿಂದ ಶಾಸಕರನ್ನು ಬಚಾವ್ ಮಾಡುವುದೇ ದೊಡ್ಡ ಕೆಲಸ ಇದರ ಮಧ್ಯ ಬಿಜೆಪಿಗೆ ಇನ್ನೊಂದು ಅವಕಾಶ ಬೇರೆ, ಸೆಂಟ್ರಲ್ ನವರು ನಮ್ಮ ಮಾತು ಕೇಳ್ತಾನೆ ಇಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕರ ಗೊಣಗಾಟ ಮುಂದುವರೆದಿದೆ. ವಿಧಾನಸೌಧಕ್ಕೆ ಎಂಟ್ರಿ ಕೊಡುವ ಮುನ್ನ, ಚಾನ್ಸರಿ ಪೆವಿಲಿಯನ್ ಹೋಟೆಲ್ ನಲ್ಲಿ 15 ನಿಮಿಷಗಳ ಶಾಸಕಾಂಗ ಸಭೆಯನ್ನು ನಡೆಸಿದ ಸಿದ್ದರಾಮಯ್ಯ ಅವರು, ದು ಸೆಮಿಫೈನಲ್ , ಫೈನಲ್ ಬಾಕಿಯಿದೆ. ಅನರ್ಹ ಶಾಸಕರ ವಿಚಾರಣೆ ತೀರ್ಪು ಬಂದ ಮೇಲೆ ಚಿತ್ರಣ ಬದಲಾಗಲಿದೆ. ಇಂದು ಏನಾದರೂ ಅದು ಪ್ರಯೋಜನವಿಲ್ಲ. ನಿಜವಾದ ಬಲಾಬಲ ತಿಳಿಯುವುದು ಸೋಮವಾರ ಹೈಕೋರ್ಟ್ ನಿರ್ಣಯ ಹೊರಬಂದಮೇಲೆ ಮಾತ್ರ. ಅಲ್ಲಿ ತನಕ ಬಿಜೆಪಿ ಅವರು ಖುಷಿಯಾಗಿರಲಿ'ಎಂದು ಸಿದ್ದು ಹೇಳಿದ್ದಾರೆ.

ಈ ಮಧ್ಯೆ 30 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬಂಡಾಯವೆದ್ದು, ಇಂದಿನ ವಿಶೇಷ ಅಧಿವೇಶನಕ್ಕೆ ಚಕ್ಕರ್ ಹಾಕುವ ಮಾತಾಡಿದ್ದಾರೆ. ಎಲ್ಲರೂ ಹೈಕಮಾಂಡ್ ಹಾಗೂ ರಾಜ್ಯಪಾಲರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಮಲ ಕೆಸರಿನಲ್ಲಿ ಹೂತು ಹೋಗಲಿದೆ. ಶಾಸಕಾಂಗಕ್ಕಿಂತ ನ್ಯಾಯಾಂಗ ದೊಡ್ಡದಾಗಿದೆ ಇದು ದುರಂತ. ರಾಜ್ಯಪಾಲರತ್ವರಿತ ನಿರ್ಧಾರ ಬೇಸರ ತಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಜೆಡಿಎಸ್ ಕೂಡಾ ಕಾದು ನೋಡುವ ತಂತ್ರ ವರ್ತೂರ್ ಬಗ್ಗೆ ನೋ ಕಾಮೆಂಟ್ ಎಂದ ಕುಮಾರಸ್ವಾಮಿ, ವಿಶ್ವಾಸಮತ ಯಾಚನೆ ದಿನಾಂಕ ಮುಂದೂಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಂಡರೂ ಕೇಳಲಿಲ್ಲ.ಹೈಕೋರ್ಟ್ ತೀರ್ಪು ಹೊರಬಿದ್ದ ನಂತರ ಮಾತನಾಡುವುದಾಗಿ ಹೇಳಿದರು.

ವಿಧಾನಸಭೆ ಬಲಾಬಲ: ಒಟ್ಟು 208 : ಸ್ಪೀಕರ್ ಹೊರತುಪಡಿಸಿ ಬಿಜೆಪಿ ಪರ 105. ಕಾಂಗ್ರೆಸ್73. ಜೆಡಿಎಸ್ 28. ಏಕೈಕ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ , ಬಿಜೆಪಿ ಗ್ಯಾಂಗ್ ಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟಾರೆ 107 ಮತಗಳೊಂದಿಗೆ ಜಯದ ಕನಸಿನಲ್ಲಿ ಬಿಜೆಪಿಯಿದೆ.

ಅನಾರೋಗ್ಯ ಪೀಡಿತರಾಗಿರುವ ಯಲಬುರ್ಗಾ ಬಿಜೆಪಿ ಶಾಸಕ ಈಶಣ್ಣ ಅವರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂಬ ವಿಪಕ್ಷಗಳ ಕೂಗಿಗೆ ಬಿಜೆಪಿ ಕಿವಿಕೊಟ್ಟಿಲ್ಲ. ಅಂಬುಲೆನ್ಸ್ ಮೂಲಕ ಬಂದ ಈಶಣ್ಣ ಅವರನ್ನು ವೀಲ್ ಚೇರ್ ಮೇಲೆ ಕೂಡಿಸಿಕೊಂಡು ವಿಧಾನಸೌಧಕ್ಕೆ ಕರೆತರಲಾಗಿದೆ. ಈ ಮಧ್ಯೆ ಮಾನಪ್ಪ ವಜ್ಜಲ್, ಅಶ್ವಥ್ ಅವರನ್ನು ಕಾಣಲು ಮಾಧ್ಯಮದವರು ಹಾತೊರೆಯುತ್ತಿದ್ದಾರೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X