ವಿಧಾನಸಭೆಯಲ್ಲಿ ನಾಳೆ ಹಲವು ಕಟ್ಟುಪಾಡು

ಮೂರು ದಿನಗಳ ಹಿಂದೆ ಜರುಗಿದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಉಂಟಾದ ಲೋಪದೋಷಗಳು ಪುನರಾವರ್ತನೆ ಆಗಬಾರದೆಂಬ ಉದ್ದೇಶದಿಂದ ಸಭಾಧ್ಯಕ್ಷ ಕೆಜಿ ಬೋಪಯ್ಯ ಹಲಕೆಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. ಅವುಗಳು ಇಂತಿವೆ :
* ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ. ಆದರೆ, ಒಬ್ಬ ವರದಿಗಾರ ಒಬ್ಬ ಕ್ಯಾಮರಾ ಮನ್ ಗೆ ಸೀಮಿತ.
* ಕಾನೂನು ಮತ್ತು ಶಿಸ್ತು ಪಾಲನೆಗೆ ವಿಧಾನಸಭಾಂಗಣದಲ್ಲಿ 149 ಮಾರ್ಷಲ್ಲುಗಳ ನೇಮಕ
* ಗನ್ ಮ್ಯಾನ್, ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಪ್ರವೇಶವಿಲ್ಲ.
* ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ನೌಕರರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ಅರ್ಧ ದಿನ ರಜೆ
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications