ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಮಾನ ಕಾಯುವನೇ ಮಾನಪ್ಪ?

By Mahesh
|
Google Oneindia Kannada News

Manappa Vajjal goes missing
ಬೆಂಗಳೂರು, ಅ.13:ಬಿಜೆಪಿಯ 105 ಶಾಸಕರಿಗೆ ಮತ್ತೆ ವಿಪ್ ಜಾರಿ ಮಾಡಲಾಗಿದೆ. ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರನ್ನು ಅನರ್ಹಗೊಳಿಸುವ ಪ್ರಕ್ರಿಯೆ ನಡೆದಿಲ್ಲ. ಮಾನಪ್ಪ ಅವರಿಗೆ ವಿಪ್ ಜಾರಿ ಮಾಡಬೇಕೇ ಬೇಡವೇ ಎಂಬ ಚರ್ಚೆ ನಡೆದಿದ್ದು,ನಾಳೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿ ಪರ ಮಾಡುವ ವಿಶ್ವಾಸವನ್ನು ಬಿಜೆಪಿಯ ಮುಖ್ಯಸಚೇತಕ ಜೀವರಾಜ್ ವ್ಯಕ್ತಪಡಿಸಿದ್ದಾರೆ. ಕಡೆಗಳಿಗೆಯಲ್ಲಿ ಭಿನ್ನರ ಗ್ಯಾಂಗ್ ಸೇರಿದ್ದ ವಜ್ಜಲ್, ಸದ್ಯಕ್ಕೆ ಯಾರ ಸಂಪರ್ಕದಲ್ಲೂ ಇಲ್ಲ.ಅವರ ದೂರವಾಣಿ ಸಂಖ್ಯೆಗಳಾದ 08444-200463 (R)/ 94495-38862 ನಿಷ್ಕ್ರಿಯವಾಗಿದೆ.

ಈ ನಡುವೆ ನಾಳೆ ನಡೆಯಲಿರುವ ವಿಧಾನಸಭಾ ಅಧಿವೇಶನ ಬಿಜೆಪಿ ಸರ್ಕಾರದ ವಿಶ್ವಾಸಮತಯಾಚನೆ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ವಿವರನ್ನು ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ನೀಡುವುದಾಗಿ ವಿಧಾನಸಭಾಧ್ಯಕ್ಷ ಕೆಜೆ ಬೋಪಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ. ರೆಸಾರ್ಟ್ ಗಳಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡಿರುವ ಪಕ್ಷಗಳು, ಕುದುರೆ ವ್ಯಾಪಾರ ನಡೆಯದಂತೆ ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ನಾಪತ್ತೆಯಾಗಿರುವ ಜೆಡಿಎಸ್‌ನ ಶಾಸಕ ಅಶ್ವಥ್ ಪ್ರತ್ಯಕ್ಷವಾಗಿ ಬಿಜೆಪಿ ಪರ ಮತ ಹಾಕುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲ 224-16 = 208ಕ್ಕೆ ಇಳಿಯುತ್ತದೆ. ಈ ಸ್ಥಿತಿಯಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯಾಬಲವು 105.ಸದ್ಯಕ್ಕೆ ಬಿಜೆಪಿಯ ಬಳಿ 106 ಮಂದಿ ಶಾಸಕರಿದ್ದಾರೆ. ಉಳಿದಂತೆ ಕಾಂಗ್ರೆಸ್ 73, ಜೆಡಿಎಸ್ 28 ಸೇರಿದರೆ ಪ್ರತಿಪಕ್ಷದ ಸಂಖ್ಯಾಬಲ 101 ಮಾತ್ರ ಆಗುತ್ತದೆ. ಅಂದರೆ ಮ್ಯಾಜಿಕ್ ಸಂಖ್ಯೆ 105ಕ್ಕಿಂತ ಒಂದು ಹೆಚ್ಚುಸ್ಥಾನ ಹೊಂದಿರುವ ಬಿಜೆಪಿ ಏಕೈಕ ಮತದಿಂದ ಗೆಲ್ಲುವ ಎಲ್ಲ ಸೂಚನೆಗಳು ಕಂಡುಬಂದಿದೆ. ಆದರೆ, ಕೊನೆ ಕ್ಷಣದ ಬದಲಾವಣೆಗೆ ಒಳಪಟ್ಟಿದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X