ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರ್ಕಾರಕ್ಕೆ ಬಹುಮತ: ಯಡಿಯೂರಪ್ಪಗೆ ಜಯ

By Rajendra
|
Google Oneindia Kannada News

Yeddyurappa wins trust vote
ಬೆಂಗಳೂರು, ಅ.11: ಪ್ರತಿಪಕ್ಷಗಳ ತೀವ್ರ ಗದ್ದಲ, ಕೂಗಾಟ ನಡುವೆ ರಣರಂಗವಾಗಿ ಮಾರ್ಪಟ್ಟಿದ್ದ ವಿಧಾನಸೌಧದಲ್ಲಿ ಕೇವಲ ಒಂದೇ ಒಂದು ನಿಮಿಷದಲ್ಲಿ ಇಷ್ಟು ದಿನಗಳ ರಾಜಕೀಯ ದೊಂಬರಾಟಕ್ಕೆ ತೆರೆಬಿದ್ದಿದೆ. ಧ್ವನಿಮತದ ಮೂಲಕ ವಿಶ್ವಾಸಮತವನ್ನು ಅಂಗೀಕರಿಸಲಾಗಿದೆ ಎಂದು ಸೋಮವಾರ ಬೆಳಗ್ಗೆ 10ಗಂಟೆಗೆ ಸರಿಯಾಗಿ ಸ್ಪೀಕರ್ ಕೆಜಿ ಬೋಪಯ್ಯ ಸದನದಲ್ಲಿ ಘೋಷಿಸುತ್ತಿದ್ದಂತೆ ವಿಧಾನಸೌಧ ಸಾಕ್ಷಾತ್ ರಣರಂಗವಾಯಿತು. ಬಳಿಕ ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಾಗಿದ್ದು ಸರಕಾರದ ಪರವಾಗಿ 106 ಮತಗಳು ಹಾಗೂ ವಿರುದ್ಧ ಶೂನ್ಯ ಮತಗಳು ಬಿದ್ದಿವೆ ಎಂದು ಬೋಪಯ್ಯ ಘೊಷಿಸಿದ್ದಾರೆ. ಈಗ ಚೆಂಡು ರಾಜ್ಯಪಾಲರ ಅಂಗಳ ಪ್ರವೇಶಿಸಿದೆ. ರಾಜ್ಯಪಾಲರ ನಿರ್ಣಯವೇ ಈಗ ಅಂತಿಮ.

ಹದಿನಾರು ಮಂದಿ ಅತೃಪ್ತ ಬಿಜೆಪಿ ಹಾಗೂ ಸ್ವತಂತ್ರ ಶಾಸಕರ ಅನರ್ಹತೆಯ ನಡುವೆಯೇ ವಿಶ್ವಾಸಮತ ಕಲಾಪ ನಡೆದಿದ್ದು, ಸದ್ಯಕ್ಕೆ ಯಡಿಯೂರಪ್ಪ ಸರಕಾರ ಬೀಸುವ ದೊಣ್ಣೆಯಿಂದ ಪಾರಾದಂತಾಗಿದೆ. ರಾಜ್ಯಪಾಲರು, ವಿಧಾನಮಂಡಲ ಅಮಾನತಿಗೇನಾದರೂ ಕ್ರಮ ಕೈಗೊಳ್ಳುವರೇ, ರಾಷ್ಟ್ರಪತಿಗೆ, ಕೇಂದ್ರಕ್ಕೆ ವರದಿ ಸಲ್ಲಿಸುವರೇ ಎಂಬುದು ಮತ್ತು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X