ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೊಡನೆ ಅಮೆರಿಕ ಶೈಕ್ಷಣಿಕ ಸ್ಪರ್ಧೆ

By Mahesh
|
Google Oneindia Kannada News

Barack Obama
ವಾಷಿಂಗ್ಟನ್, ಅ.7: ಶಿಕ್ಷಣಕ್ಕಾಗಿ ಹೆಚ್ಚಿನ ನಿಧಿಯನ್ನು ವಿನಿಯೋಗಿಸುವ ಭಾರತ ಹಾಗೂ ಚೀನಾದಂತಹ ರಾಷ್ಟ್ರಗಳೊಂದಿಗೆ ಭವಿಷ್ಯತ್ತಿಗಾಗಿ ಹೋರಾಟದಲ್ಲಿ ತೊಡಗಿರುವ ಅಮೆರಿಕವು ತನ್ನ ಆಯವ್ಯಯದಲ್ಲಿ ಶಿಕ್ಷಣ ಅನುದಾನವನ್ನು ಕಡಿತಗೊಳಿಸಿರುವುದನ್ನು ಅಧ್ಯಕ್ಷ ಬರಾಕ್ ಒಬಾಮ ಖಂಡಿಸಿದ್ದಾರೆ. ಮುಂದಿನ ಕೆಲವೇ ವಾರಗಳ ಬಳಿಕ ಭಾರತ ಪ್ರವಾಸ ಕೈಗೊಳ್ಳಲಿರುವ ಒಬಾಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಚೀನಾವು ಶಿಕ್ಷಣ ಅನುದಾನವನ್ನು ತಕ್ಷಣಕ್ಕೆ ಶೇಕಡ 20ರಷ್ಟು ಕಡಿತಗೊಳಿಸಿಲ್ಲ. ಭಾರತ ಕೂಡ ಶೇಕಡ 20ರಷ್ಟು ಕಡಿತವನ್ನು ಮಾಡಿಲ್ಲ. ನಾವು ಭವಿಷ್ಯತ್ತಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟವು ಶಿಕ್ಷಣವನ್ನೇ ಅವಲಂಬಿಸಿದೆ"" ಎಂದು ಸಮುದಾಯ ಕಾಲೇಜುಗಳಿಗೆ ಸಂಬಂಧಿಸಿದ ಶ್ವೇತಭವನದ ಶೃಂಗಸಭೆಯಲ್ಲಿ ಒಬಾಮ ತಿಳಿಸಿದ್ದಾರೆ.

'8 ದಶಲಕ್ಷ ವಿದ್ಯಾರ್ಥಿಗಳಿಗೆ ನೆರವನ್ನು ಕಡಿತಗೊಳಿಸುವುದು ಅಥವಾ ಸಮುದಾಯ ಕಾಲೇಜುಗಳಿಗೆ ಸಂಬಂಧಿಸಿದ ನಮ್ಮ ಬದ್ಧತೆಯಿಂದ ಹಿಂದೆ ಸರಿಯುವುದೆಂದರೆ ಮುಂಚೂಣಿಗೆ ಸಾಗುತ್ತಿರುವ ನಮ್ಮ ಪಡೆಗಳನ್ನು ದುರ್ಬಲಗೊಳಿಸಿದಂತೆ' ಎಂದು ಒಬಾಮಾ ವಿವರಿಸಿದ್ದಾರೆ.

ಅಮೆರಿಕನ್ ಕಾಂಗ್ರೆಸ್‌ನಲ್ಲಿ ಕಳೆದ ವಾರ ರಿಪಬ್ಲಿಕನ್ ಮುಖಂಡರು ಬಿಡುಗಡೆಗೊಳಿಸಿರುವ ಆರ್ಥಿಕ ಯೋಜನೆಯ ಕುರಿತು ಒಬಾಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತಾಪಿತ ಆರ್ಥಿಕ ಯೋಜನೆಯು ಶೈಕ್ಷಣಿಕ ಅನುದಾನವನ್ನು ಶೇಕಡ 20ರಷ್ಟು ಕಡಿತಗೊಳಿಸಿದೆ. ''ನೂತನ ಯೋಜನೆಯು 8 ದಶಲಕ್ಷ ಕಾಲೇಜು ವಿದ್ಯಾರ್ಥಿಗಳ ಆರ್ಥಿಕ ನೇರವನ್ನು ಕಡಿತ ಅಥವಾ ರದ್ದುಗೊಳಿಸಲಿದೆ. ಈ ಯೋಜನೆಯ ಪರಿಣಾಮ ನಾವಿಂದು ಹೇಳಿಕೊಳ್ಳುತ್ತಿರುವ ಉದ್ದೇಶಗಳನ್ನು ಈಡೇರಿಸುವಲ್ಲಿ ಸಮುದಾಯ ಕಾಲೇಜುಗಳು ಸೂಕ್ತ ಸಂಪನ್ಮೂಲಗಳಿಲ್ಲದೆ ಸಂಕಷ್ಟಕ್ಕೆ ಈಡಾಗಲಿವೆ"" ಎಂದು ಅವರು ವಾದಿಸಿದ್ದಾರೆ.

'ನಮ್ಮ ರಾಷ್ಟ್ರವು ಅಭಿವೃದ್ಧಿಯತ್ತ ಸಾಗಬೇಕಾದಲ್ಲಿ ನಮ್ಮ ಯುವಜನತೆಗಾಗಿ ಬಂಡವಾಳ ಹೂಡುವುದನ್ನು ಕಡಿತಗೊಳಿಸುವ ಬಗ್ಗೆ ನಾವು ಯೋಚಿಸಬಾರದು' ಎಂದು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X