ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾ ಉಸ್ತುವಾರಿ ಒಲ್ಲೆ ಎಂದ ಶೋಭಾ ಕರಂದ್ಲಾಜೆ

By Mahesh
|
Google Oneindia Kannada News

Shobha Karandlaje
ತುಮಕೂರು, ಸೆ.30: 'ಇಂಧನ ಖಾತೆಯ ಬಗ್ಗೆ ನನಗೆ ಸರಿಯಾದ ಅರಿವು ಪಡೆಯಲು ಕನಿಷ್ಠ ಆರು ತಿಂಗಳಾದರೂ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ನಾನು ಜಿಲ್ಲಾ ಉಸ್ತುವಾರಿಯನ್ನು ಒಪ್ಪಿಕೊಳ್ಳಲು ಕಷ್ಟ' ಎಂದು ತುಮಕೂರಿನ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಬುಧವಾರದಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನೀಡಿರುವ ಇಂಧನ ಇಲಾಖೆ ಬಹಳ ವಿಶಾಲವಾಗಿದ್ದು, ಹಲವಾರು ಸಮಸ್ಯೆಗಳನ್ನು ಹೊಂದಿದೆ. ಜನರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ ಂದರು.

ಪ್ರತಿದಿನ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡುತ್ತಿದ್ದು, ಜನರ ಬಹುತೇಕ ತೆರಿಗೆ ಹಣ ವಿದ್ಯುತ್ ಖರೀದಿಗೆ ಹೋಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಪರ್ಯಾಯ ವಿದ್ಯುತ್ ಉತ್ಪಾದನೆಗೆ ತೊಡಗ ಬೇಕಾಗಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಸ್ಥಾನ ಒಪ್ಪಿಕೊಳ್ಳುವುದು ತುಸು ಕಷ್ಟವಾಗುತ್ತದೆ ಎಂದು ಹೇಳಿದರು..

ಇಲಾಖೆಯಲ್ಲಿ ಉತ್ಪಾದನೆಯಾಗುವ ಮತ್ತು ವಿತರಣೆಯಾಗುವ ಪ್ರತಿ ಯೂನಿಟ್ ಕರೆಂಟಿನ ಬಗ್ಗೆ ತಕ್ಷಣದಲ್ಲಿ ಮಾಹಿತಿ ಪಡೆಯುವಷ್ಟು ಇಲಾಖೆ ಗಣಕೀಕರಣಗೊಂಡಿದೆ. ಹಾಗಾಗಿ ಸೋರಿಕೆಯನ್ನು ಸಮರ್ಥವಾಗಿ ತಡೆಗಟ್ಟಬಹುದಾಗಿದ್ದು, ಇದರ ಜೊತೆಗೆ ಬೇರೆ ಮಾರ್ಗಗಳ ಮೂಲಕವೂ ವಿದ್ಯುತ್ ಉತ್ಪಾದಿಸಲು ಇರುವ ಅವಕಾಶಗಳನ್ನು ಪತ್ತೆ ಹಚ್ಚಿ ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಶೋಭಾ ಹೇಳಿದರು. .

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X