ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ : ಹೊರಗುತ್ತಿಗೆ ತಡೆ ಮಸೂದೆಗೆ ಸೋಲು

By Mrutyunjaya Kalmat
|
Google Oneindia Kannada News

Barack Obama
ವಾಷಿಂಗ್ ಟನ್, ಸೆ. 30 : ಬಿಪಿಓ ಮೂಲಕ ಉದ್ಯೋಗ ನೀಡುವ ಅಮೆರಿಕದ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನು ನಿರಾಕರಿಸುವ ಮಸೂದೆ ಸೆನೆಟ್ ನಲ್ಲಿ ಅಂಗೀಕಾರ ದೊರೆಯದಂತೆ ಮಾಡುವಲ್ಲಿ ರಿಪಬ್ಲಿಕನ್ ಸದಸ್ಯರು ಸಫಲರಾಗಿದ್ದಾರೆ. ಭಾರತದ ಪಾಲಿಗೆ ಇದು ಮಹತ್ತರ ಬೆಳವಣಿಗೆಯಾಗಿದ್ದು, ಐಟಿ ವಲಯ ನಿಟ್ಟಿಸಿರು ಬಿಡುವಂತಾಗಿದೆ.

ಇದರ ಜೊತೆಗೆ ವಿದೇಶಿಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮತ್ತು ಎಚ್ 1ಬಿ ಮತ್ತು ಎಲ್ 1 ವೀಸಾವನ್ನು ದುರ್ಬಳಿಕೆ ಮಾಡುವುದನ್ನು ತಡೆಗಟ್ಟುವ ಸಂಬಂಧದ ಎರಡು ತಿದ್ದುಪಡಿಗಳನ್ನು ಸ್ವತಃ ಡೆಮಾಕ್ರಟಿಕ್ ಸದಸ್ಯರೇ ತಡೆಹಿಡಿದ ಪ್ರಸಂಗವೂ ನಡೆಯಿತು. ಕ್ರಿಯೇಟಿಂಗ್ ಅಮೆರಿಕನ್ ಜಾಬ್ಸ್ ಅಂಡ್ ಆಫ್ ಶೋರಿಂಗ್ ಆಕ್ಟ್ ಗೆ 53-45 ಮತಗಳ ಅಂತರದಲ್ಲಿ ಸೋಲು ಉಂಟಾಯಿತು. ಮಸೂದೆ ಅಂಗೀಕಾರವಾಗಬೇಕಿದ್ದರೆ ಕನಿಷ್ಠ 60 ಮತಗಳ ಅಗತ್ಯ ಇತ್ತು.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಕನಸಿನ ಕೂಸಾಗಿದ್ದ ಹೊರಗುತ್ತಿಗೆ ತಡೆ ಮಸೂದೆ ಜನಪ್ರತಿನಿಧಿ ಸಭೆ ಬೆಂಬಲಕ್ಕೆ ನಿಂತಾಗ ಭಾರತದಲ್ಲಿ ಆತಂಕ ಮನೆ ಮಾಡಿತ್ತು. ಒಬಾಮಾ ಕನಸಿನ ಮಸೂದೆಗೆ ಅವರ ಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X