ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ : ಧಾರ್ಮಿಕ ಸಂಘಟನೆಗಳ ಮೇಲೆ ವಿಶೇಷ ನಿಗಾ

By Mrutyunjaya Kalmat
|
Google Oneindia Kannada News

Ayodhya Ram-Janmabhoomi-Babri masjid
ನವದೆಹಲಿ, ಸೆ. 29 : ವಿವಾದಿತ ರಾಮಜನ್ಮಭೂಮಿ ಬಾಬ್ರಿ ಮಸೀದಿ ಮಾಲೀಕತ್ವದ ತೀರ್ಪಿನ ಸೆ.30 ರಂದು ಹೊರಬೀಳಲಿರುವ ಹಿನ್ನೆಲೆಯಲ್ಲಿ ಕೇಂದ್ರ ಕಟ್ಟೆಚ್ಚರ ವಹಿಸಿದ್ದು, ಧಾರ್ಮಿಕ ಸಂಘಟನೆಗಳ ಮೇಲೆ ವಿಶೇಷ ನಿಗಾ ಇರಿಸಿದೆ. ಜೊತೆಗೆ ದೇಶದ 32 ಸ್ಥಳಗಳನ್ನು ಅತಿಸೂಕ್ಷ್ಮ ಸ್ಥಳಗಳೆಂದು ಗುರುತಿಸಿದೆ. ಈ ಮಧ್ಯೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡಾ ಶಾಂತಿ ಕಾಪಾಡಿ ಎಂದು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅತಿ ಸೂಕ್ಷ್ಮ ಸ್ಥಳಗಳಲ್ಲಿ ನಾಲ್ಕು ಸ್ಥಳಗಳು ಉತ್ತರ ಪ್ರದೇಶದಲ್ಲೇ ಇವೆ. ಅಹಿತಕರ ಘಟನೆಗಳು ನಡೆದಲ್ಲಿ ಶೀಘ್ರ ನಿಯೋಜನೆಗಾಗಿ ದೇಶದಾದ್ಯಂತ 16 ಆಯಕಟ್ಟಿನ ಸ್ಥಳಗಳಲ್ಲಿ ಅರೆಸೇನಾ ಪಡೆಯನ್ನು ಸನ್ನದ್ಧವಾಗಿ ಇಡಲಾಗಿದೆ. ಭದ್ರತಾ ಸಿಬ್ಬಂದಿಯನ್ನು ವಿಮಾನಗಳ ಮೂಲಕ ಕೊಂಡೊಯ್ಯಲು ಅನುಕೂಲವಾಗುವಂತೆ ವಿಮಾನ ನಿಲ್ದಾಣಗಳ ಬಳಿ ತುಕಡಿಗಳನ್ನು ಇರಿಸಲಾಗಿದೆ. ಅಹಮದಾಬಾದ್, ದೆಹಲಿ, ಕೊಯಮತ್ತೂರಿನಲ್ಲಿ ಅರೆಸೇನಾಪಡೆಗಳ ತುಕಡಿಗಳನ್ನು ಇರಿಸಲಾಗಿದೆ.

ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಕೂಡಲೇ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂದೇಶ ರವಾನಿಸಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಕೇರಳ ಹಾಗೂ ಕೆಲ ಕೆಂದ್ರಾಡಳಿತ ಪ್ರದೇಶಗಳ ಸರಕಾರಕ್ಕೆ ವಿಶೇಷ ಎಚ್ಚರ ವಹಿಸುವಂತೆ ಹಾಗೂ ಭದ್ರತಾ ಸಿಬ್ಬಂದಿಯನ್ನು ಸಜ್ಜಾಗಿ ಇಡುವಂತೆ ಸೂಚಿಸಿದೆ. ಇದರ ಜೊತೆಗೆ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ಮೇಲೆ ಕಣ್ಣಿಡುವಂತೆ ಸೂಚಿಸಿದೆ.

ತೀರ್ಪಿನ ವಿವರಗಳಿಗೆ ವಿಶೇಷ ವೆಬ್ ಸೈಟ್ : www.allahabadhighcourt.in/ayodhyabench.html
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X