ದಂಪತಿ ಆತ್ಮಹತ್ಯೆ, ಕಾರಣ ಇನ್ನೂ ನಿಗೂಢ

Couple commit suicide in Vyalikaval
ಬೆಂಗಳೂರು, ಸೆ. 27: ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ದತ್ತಾತ್ರೇಯ ದೇವಾಲಯ ಸಮೀಪದ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ನವ ವಿವಾಹಿತರು ನಿಗೂಢ ರೀತಿಯಲ್ಲಿ ನೇಣಿಗೆ ಶರಣಾದ ದಾರುಣ ಘಟನೆ ಭಾನುವಾರ ಬೆಳಕಿಗ ಬಂದಿದೆ. ಮೃತರನ್ನು ಸೈಂದಿಲ್ (26) ಹಾಗೂ ಕವಿತಾ (19) ಎಂದು ಗುರುತಿಸಲಾಗಿದೆ.

ನಗರದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಸೈಂದಿಲ್, ಕಳೆದ 10 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮೃತಳಾದ ಕವಿತಾ ಐದು ತಿಂಗಳ ಗರ್ಭಿಣಿ ಎಂದು ಹೇಳಲಾಗಿದೆ. ನಿನ್ನೆ ಸಂಜೆ ಚೆನ್ನಾಗಿದ್ದ ದಂಪತಿ ರವಿವಾರ ಬೆಳಗ್ಗೆ ನೇಣಿಗೆ ಶರಣಾಗಿರುವುದು ಅನುಮಾನಗಳಿಗೆ ಎಡೆ ಮಾಡಿದೆ.ಇಬ್ಬರು ಸಂಬಂಧಿಕರಾಗಿದ್ದು, ಯಾವುದೇ ವೈಮನಸ್ಯ ಇರಲಿಲ್ಲ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ ಸೈಂದಿಲ್ ಮನೆಗೆ ಬಂದ ತಂದೆ ಕೃಷ್ಣ ಬಾಗಿಲು ಬಡಿದಾಗ, ಎಷ್ಟು ಹೊತ್ತಾದರೂ ಬಾಗಿಲು ತೆರೆಯದ ಕಾರಣ ಅನುಮಾನ ಹಾಗೂ ಆತಂಕದಿಂದ ಕಿಟಕಿಯ ಮೂಲಕ ಇಣುಕಿ ನೋಡಿದಾಗ ದಂಪತಿ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ಮನೆಯಲ್ಲಿನ ಸೀಲಿಂಗ್ ಹುಕ್ ಗೆ ದುಪ್ಪಟ ಹಾಗೂ ಸೀರೆಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳದಲ್ಲಿ ಅತ್ಮಹತ್ಯಾ ಪತ್ರ ಇರಲಿಲ್ಲ. ದಂಪತಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ವೈಯಾಲಿ ಕಾವಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ಹೇಳಿದರು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+