ಹಣಕ್ಕೆ ಬಾಯಿ ಬಿಡುತ್ತಿರುವ ಮಠಮಾನ್ಯಗಳು : ಎಚ್ಡಿಕೆ
ಬೆಂಗಳೂರು,
ಸೆ. 27 : ಬಿಜೆಪಿ ಸರಕಾರ ಬಿಡುಗಡೆ ಮಾಡುತ್ತಿರುವ ಹಣವನ್ನು ಪಡೆಯಲು ಮಠಮಾನ್ಯಗಳು ತುದಿಗಾಲಲ್ಲಿ ನಿಂತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಠಾಧೀಶರನ್ನು ಲೇವಡಿ ಮಾಡಿದ್ದಾರೆ. id="toptextpromo">ತಾಲ್ಲೂಕಿನ
ಬಿಡದಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಡಿವೈಎಸ್ಪಿ ವಿ ಗೋವಿಂದಯ್ಯ ಮತ್ತು ಸಮಾಜದ ಇತರ ಗಣ್ಯರಿಗೆ ಕುಂಚಿಟಗ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಂಜಾವದೂತ ಸ್ವಾಮೀಜಿಗಳು ಸರಕಾರದ ದುಡ್ಡಿಗಾಗಿ ಕಾಯದೆ ಸ್ವಶಕ್ತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಇತರೆ ಮಠಾಧೀಶರಿಗೆ ಮಾದರಿ ಎಂದರು. id='are-slot-1' class='oiad oi-axt oiadv'> id='top-searched-articles'>ಧರ್ಮಗುರುಗಳು
ಯಾವುದೇ ಒಂದು ಜನಾಂಗಕ್ಕೆ ಸಿಮೀತಗೊಳ್ಳದೆ ಇಡೀ ಸಮಾಜದ ಮಾರ್ಗದರ್ಶಕರಾಗಬೇಕು. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಒಕ್ಕಲಿಗ ಸಮಾಜ ಹೆಚ್ಚು ಟೀಕೆಗೆ ಒಳಗಾಗಿರುವ ಸಮಾಜವೂ ಹೌದು. ಕೆಲವರು ಸಮಾಜದ ಬಗ್ಗೆ ಸಾರ್ವಜನಿಕವಾಗಿ ವ್ಯಕ್ತಪಡಿಸಿರುವ ಅನಿಸಿಕೆಗಳು ನೋವು ತಂದಿದೆ ಎಂದು ಕುಮಾರಸ್ವಾಮಿ ಹೇಳಿದರು.











Click it and Unblock the Notifications