ಇಂಡಿಯನ್ ಮುಜಾಹಿದೀನ್ ಪರ ದಿಗ್ವಿಜಯ್ ಟಾಂಟಾಂ

Congress logo
ನವದೆಹಲಿ, ಸೆ.27 : ಮುಂಬೈ ಭಯೋತ್ಪಾದನೆ ಸೇರಿದಂತೆ ಭಾರತದ ವಿವಿಧ ಪ್ರದೇಶಗಳ ಮೇಲೆ ಭಯೋತ್ಪಾದನೆ ದಾಳಿ ನಡೆಸುವ ಬೆದರಿಕೆಯನ್ನು ಹಾಕುತ್ತಿರುವ ಇಂಡಿಯನ್ ಮುಜಾಹಿದೀನ್ ಸಂಘಟನೆ ಅಸ್ತಿತ್ವದಲ್ಲಿ ಇಲ್ಲವಂತೆ. ಭಾರತೀಯ ತನಿಖಾ ದಳಗಳಿಗೆ ಈ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲವಂತೆ. ಹೀಗಂತ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್.

ಕಾಮನ್ ವೆಲ್ತ್ ಕ್ರೀಡಾಕೂಟ ಉಗ್ರರ ದಾಳಿಯ ಭಯ ಇದ್ದೇಇದೆ. ಅಲ್ಲದೇ, ಇತ್ತೀಚೆಗೆ ದೆಹಲಿಯ ಜಾಮಾ ಮಸೀದಿ ಸಮೀಪ ನಡೆದ ಎರಡೆರಡು ಘಟನೆಗಳ ನಂತರ ರಾಜಧಾನಿಯಲ್ಲಿ ನಡೆದ ಭಯೋತ್ಪಾದನೆಯ ರಾಜಕೀಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ಇಂಡಿಯನ್ ಮುಜಾಹಿದೀನ್ ಅಸ್ತಿತ್ವದ ಕುರಿತು ನನಗೇನೂ ತಿಳಿದಿಲ್ಲ ಎಂದು ಹೇಳಿ ಮುಜುಗರ ಉಂಟು ಮಾಡಿದ್ದಾರೆ.

ಸೆಪ್ಟೆಂಬರ್ 19ರಂದು ಜಾಮಾ ಮಸೀದಿ ಸಮೀಪ ವಿದೇಶೀಯರಿಗೆ ಇಬ್ಬರು ಬೈಕ್ ಸವಾರರು ಗುಂಡಿಕ್ಕಿ ಪರಾರಿಯಾದ ನಂತರ ಪತ್ರಿಕಾ ಕಚೇರಿಗಳಿಗೆ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಬಂದಿರುವ ಇ-ಮೇಲ್ ಬಗ್ಗೆ ಅವರು ಮಾತನಾಡುತ್ತಿದ್ದರು. ಇಂಡಿಯನ್ ಮುಜಾಹಿದೀನ್ ಇದೆಯೋ ಅಥವಾ ಇಲ್ಲವೋ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಆ ಸಂಘಟನೆ ಅಸ್ತಿತ್ವದಲ್ಲಿರುವ ಕುರಿತು ಯಾವುದೇ ಗುರುತರ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+