ವಿದ್ಯುತ್ ಖರೀದಿಗೆ ಶೋಭಾ ಸೂಚನೆ
ಬೆಂಗಳೂರು,
ಸೆ.24: ಇಂಧನ ಇಲಾಖೆಗೆ ಶಕ್ತಿ ತುಂಬ ನಿಟ್ಟಿನಲ್ಲಿ ಹೊಸದಾಗಿ ಆ ಖಾತೆ ವಹಿಸಿಕೊಂಡಿರುವ ಸಚಿವೆ ಶೋಭಾ ಕರಂದ್ಲಾಜೆ ಅವರು ಬುಧವಾರ ಕೆಪಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಎಸ್ ಎಂ ಜಾಮ್ ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. id="toptextpromo">ವಿದ್ಯುತ್
ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ಖರೀದಿ ಪ್ರಕ್ರಿಯೆ ನಡೆದಿದ್ದು, ರಾಜ್ಯ, ನೆರೆ ರಾಜ್ಯಗಳಲ್ಲಿ ಖಾಸಗಿ ಸಂಸ್ಥೆಗಳಿಂದ ಲಭ್ಯವಿರುವ ವಿದ್ಯುತ್ ಕಡಿಮೆ ದರದಲ್ಲಿ ಪಡೆಯುವತ್ತ ಆದ್ಯತೆ ನೀಡಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಯಚೂರು
ಶಾಖೋತ್ಪನ್ನ ವಿದ್ಯುತ್ ಘಟಕದಲ್ಲಿ ಉತ್ಪಾದನೆ ಸಮರ್ಪಕವಾಗಿ ನಡೆಯದಿರುವುದರಿಂದ ವಿದ್ಯುತ್ ವಿತರಣೆ ಮೇಲೆ ಪರಿಣಾಮ ಬಿದ್ದಿದೆ. ಜೊತೆಗೆ ಬಳ್ಳಾರಿ ಘಟಕದಲ್ಲೂ ನಿರೀಕ್ಷಿಸಿದಷ್ಟು ವಿದ್ಯುತ್ ಉತ್ಪಾದನೆಯಾಗದಿರುವ ಬಗ್ಗೆಯೂ ಸಚಿವರು ಮಾಹಿತಿ ಪಡೆದು ರೈತರು ಹಾಗೂ ಜನತೆಗೆ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿದರು. ಇಲಾಖೆಯ ಕಾರ್ಯದರ್ಶಿಗಳು, ಅಧಿಕಾರಿಗಳು ಹಾಜರಿದ್ದರು.











Click it and Unblock the Notifications