ನಿಗಮ ಮಂಡಳಿಗೆ ಶೀಘ್ರವೇ ಅಧ್ಯಕ್ಷರ ನೇಮಕ
ಬೆಂಗಳೂರು,
ಸೆ.23: ಮುಂದಿನ ವರ್ಷದ ಆರಂಭ ಅಥವಾ ಬಜೆಟ್ ಮಂಡನೆ ಬಳಿಕ ಮತ್ತೆ ಸಚಿವ ಸಂಪುಟ ವಿಸ್ತರಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಪಕ್ಷದ ವರಿಷ್ಠ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. id="toptextpromo">ಸದ್ಯ
ನಡೆದಿರುವ ಸಂಪುಟ ವಿಸ್ತರಣೆ ಎಲ್ಲರಿಗೂ ಸಮಾಧಾನ ತಂದಿದ್ದು, ಯಾವುದೇ ಗೊಂದಲ ಸೃಷ್ಟಿಯಾಗಿಲ್ಲ.ಯಾವ ಶಾಸಕನೂ ಬಂಡಾಯ ಎದ್ದಿಲ್ಲ. ಇಲ್ಲವೂ ಸುಸೂತ್ರವಾಗಿ ಪೂರ್ಣವಾಗಲಿದೆ ಎಂದು ಈಶ್ವರಪ್ಪ ನೆಮ್ಮದಿಯ ನಿಟ್ಟಿಸಿರು ಬಿಟ್ಟರು. ನಿಗಮ-ಮಂಡಳಿಗಳಲ್ಲಿ ಪ್ರಾತಿನಿಧ್ಯ ಸಚಿವ ಸ್ಥಾನ ಸಿಗದ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಲು ಪಕ್ಷವು ತೀರ್ಮಾನಿಸಿದೆ. id='are-slot-1' class='oiad oi-axt oiadv'> id='top-searched-articles'>ಮುಂದಿನ
15 ದಿನದಲ್ಲಿ ಆ ಕಾರ್ಯ ನಡೆಯಲಿದ್ದು, ಖಾಲಿಯಿರುವ ಸಂಸ್ಥೆಗಳಿಗೆ ನೇಮಕ ಮಾಡಲಾಗುವುದು ಎಂದು ಹೇಳಿದರು. ಅಲ್ಲದೆ, ಆಯಾ ವಿಧಾನಸಭಾ ಕ್ಷೇತ್ರಗಳ ನಾಲ್ಕು ಮಂದಿಗೆ ರಾಜ್ಯ ಮಟ್ಟದ ನಿಗಮ-ಮಂಡಳಿಗಳಲ್ಲಿ ಸದಸ್ಯ ಸ್ಥಾನ ನೀಡಲು ಪಕ್ಷವು ಉದ್ದೇಶಿಸಿದೆ. ಅವುಗಳಲ್ಲಿ ತಲಾ ಒಂದು ಸ್ಥಾನವನ್ನು ಸಾಮಾನ್ಯ, ಪರಿಶಿಷ್ಟ, ಹಿಂದುಳಿದ ಹಾಗೂ ಮಹಿಳಾ ವರ್ಗದಿಂದ ಆಯ್ಕೆ ಮಾಡಲಾಗುವುದು. ಇವುಗಳನ್ನು ಪಕ್ಷಕ್ಕಾಗಿ ದುಡಿದವರಿಗೆ ನೀಡುವುದಾಗಿ ಈಶ್ವರಪ್ಪ ಸ್ಪಷ್ಟಪಡಿಸಿದರು.











Click it and Unblock the Notifications